Select Your Language

Notifications

webdunia
webdunia
webdunia
webdunia

ಮೊದಲ ಮಗುವಿನ ನಿರೀಕ್ಷೆಯಲ್ಲಿ ದೀಪಿಕಾ, ರಣವೀರ್ ದಂಪತಿ: ಬೆಂಗಳೂರಿನಲ್ಲೇ ಹೆರಿಗೆ

Deepika Padukone

Sampriya

ಮುಂಬೈ , ಭಾನುವಾರ, 17 ಮಾರ್ಚ್ 2024 (11:39 IST)
Photo Courtesy Facebook
ಮುಂಬೈ: ಬಾಲಿವುಡ್ ಖ್ಯಾತ ಜೋಡಿ ರಣವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ದಂಪತಿ ಶೀಘ್ರದಲ್ಲೇ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.  ಬೆಂಗಳೂರಿನವರಾಗಿರುವ ದೀಪಿಕಾ ಅವರು ಇಲ್ಲೇ ಮೊದಲ ಮಗುವಿಗೆ ಜನ್ಮ ನೀಡಲಿದ್ದಾರೆ. ಅದಲ್ಲದೆ ಬೆಂಗಳೂರಿನಲ್ಲೇ ತಮ್ಮ ಹೆಚ್ಚಿನ ಸಮಯವನ್ನು ಕಳೆಯಲಿದ್ದಾರೆ  ಎನ್ನಲಾಗಿದೆ. 
 
2018ರ ನವೆಂಬರ್ 14ರಂದು ದೀಪಿಕಾ ಪಡುಕೋಣೆ ಹಾಗೂ ರಣ್ವೀರ್ ಸಿಂಗ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಈ ಜೋಡಿ 6 ವರ್ಷಗಳ ನಂತರ ಮೊದಲ ಮಗುವಿನ ನಿರೀಕ್ಷೆಯಲ್ಲಿದೆ. ಈ ಜೋಡಿಗೆ ಸೆಲೆಬ್ರೆಟಿಗಳು ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಶುಭಾಶಯಗಳ ತಿಳಿಸಿದ್ದರು. 
 
ಈಚೆಗೆ ನಟಿ ಆಲಿಯಾ ಭಟ್ ಅವರು ಹೆಣ್ಣು ಮಗುವಿಗೆ ಮುಂಬೈನಲ್ಲಿ ಜನ್ಮ ನೀಡಿದ್ದರು. ಇದೀಗ ದಿಪೀಕಾ ಅವರು ತಮ್ಮ ತಾಯಿ ನೆಲೆದಲ್ಲೇ ಮೊದಲ ಮಗುವಿಗೆ ಜನ್ಮ ನೀಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಈ ಹಿಂದೆ ದಿಪೀಕಾ ಅವರ ಫೆವರೆಟ್ ಆಹಾರದ ಬಗ್ಗೆ ಹೇಳಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ನನಗೆ ಅನ್ನ ಹಾಗೂ ರಸಂ ಊಟ ಆಲ್ ಟೈಮ್ ಫೆವರೇಟ್ ಎಂದಿದ್ದರು. ಅದೊಂದಿದ್ದರೆ ನನಗೆ ಬೇರೇನೂ ಬೇಕಾಗಿಲ್ಲ ಎಂದಿದ್ದರೂ. 
 
ದೀಪಿಕಾ ಪಡುಕೋಣೆ ಪ್ರಸ್ತತ ಪ್ರಭಾಸ್ ನಟನೆಯ 'ಕಲ್ಕಿ' ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಈ ಸಿನಿಮಾದ ಶೂಟಿಂಗ್ ಅನ್ನು ಬಹುತೇಕ ಮುಗಿಸಿದ್ದಾರೆ ಎನ್ನಲಾಗುತ್ತಿದೆ. ಇದರ ಜೊತೆಗೆ 'ಸಿಂಘಂ ಅಗೇನ್' ಸಿನಿಮಾದಲ್ಲಿ ಪೊಲೀಸ್ ಅಧಿಕಾರಿಯಾಗಿ ನಟಿಸುತ್ತಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ಸದ್ಯ ಮಗಳೇ ನನ್ನ 'ಫ್ಯಾಶನ್ ಮ್ಯೂಸ್': ಪ್ರಿಯಾಂಕಾ ಚೋಪ್ರಾ