Select Your Language

Notifications

webdunia
webdunia
webdunia
webdunia

ಸದ್ಯ ಮಗಳೇ ನನ್ನ 'ಫ್ಯಾಶನ್ ಮ್ಯೂಸ್': ಪ್ರಿಯಾಂಕಾ ಚೋಪ್ರಾ

PriyankaChopra

Sampriya

ಮುಂಬೈ , ಶನಿವಾರ, 16 ಮಾರ್ಚ್ 2024 (19:37 IST)
Photo Courtesy Facebook
ಮುಂಬೈ: ಬಾಲಿವುಡ್ ಖ್ಯಾತ ನಟಿ ಪ್ರಿಯಾಂಕ ಚೋಪ್ರಾ ಅವರು ತಮ್ಮ ಮಗಳಿಗೆ ಡ್ರೆಸ್ಸಿಂಗ್ ಮಾಡುವುದು ತುಂಬಾನೇ ಆನಂದವನ್ನು ನೀಡುತ್ತದೆ. ಸದ್ಯ ಆಕೆಯೇ ನನ್ನ ಫ್ಯಾಶನ್ ಮ್ಯೂಸ್ ಎಂದು ಹೇಳಿಕೊಂಡಿದ್ದಾರೆ. 
 
ಬಾಲಿವುಡ್ ಸ್ಟಾರ್ ನಟರ ಮಕ್ಕಳೆ ಹಾಗೇ. ಹುಟ್ಟಿನಿಂದಲೇ ಸುದ್ದಿಯಲ್ಲೇ ಇರುತ್ತಾರೆ. ತಂದೆ ತಾಯಿಯರಂತೆ ಮಕ್ಕಳಿಗೂ ಸ್ಟಾರ್ ಗಿರಿ ಹುಟ್ಟಿನಿಂದಲೇ ಸಿಕ್ಕಿ ಬಿಡುತ್ತದೆ. ಇದೀಗ ಪ್ರಿಯಾಂಕ ಅವರು ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಮ್ಮ ಮಗಳ ಬಗ್ಗೆ ಹೇಳಿಕೊಂಡಿದ್ದಾರೆ. 
 
ಸಂದರ್ಶನದಲ್ಲಿ ಪ್ರಿಯಾಂಕ ಆಡಿದ ಮಾತು ಹೀಗಿದೆ: 
 
ಸಂದರ್ಶಕನೊಬ್ಬ ಪ್ರಿಯಾಂಕ ಬಳಿ ಫ್ಯಾಷನ್ ಮ್ಯೂಸ್ ಬಗ್ಗೆ ಕೇಳಿದಾಗ, 'ಈ ಸಮಯದಲ್ಲಿ ನನ್ನ ಫ್ಯಾಷನ್ ಮ್ಯೂಸ್ ಬಂದ್ಬಿಟ್ಟು ನನ್ನ ಮಗಳು, ಅವಳಿಗೆ ಡ್ರೆಸ್ಸಿಂಗ್ ಮಾಡುವುದೆಂದರೆ ನನಗೆ ತುಂಬಾ ಇಷ್ಟ. ಅವಳ ದಿನನಿತ್ಯದ ಬಟ್ಟೆಗಳನ್ನು ಆಯ್ಕೆ ಮಾಡುವುದು ತುಂಬಾ ಖುಷಿ ನೀಡುತ್ತದೆ ಎಂದಿದ್ದಾರೆ. 
 
ಸದ್ಯ ಪ್ರಿಯಾಂಕಾ ಅವರು ಮಗಳ ಜತೆ ಭಾರತಕ್ಕೆ ಬಂದಿಳಿದಿದ್ದು, ಈಚೆಗೆ ಮುಂಬೈ ವಿಮಾನ ನಿಲ್ದಾಣನದಲ್ಲಿ ಮಗಳ ಜತೆ ಕಾಣಿಸಿಕೊಂಡಿದ್ದರು. ಈ ವೇಳೆ ಇನ್‌ಸ್ಟಾಗ್ರಾಂ ಸ್ಟೋರೀಸ್‌ನಲ್ಲಿ ತಮ್ಮ ಮತ್ತು ಮಾಲ್ತಿಯ ಚಿತ್ರವನ್ನು ಹಂಚಿಕೊಂಡಿದ್ದಾರೆ.  ಇನ್ನೂ ಶುಕ್ರವಾರ ಸಂಜೆ ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡಾಗ ನಟ ತಿಳಿ ಗುಲಾಬಿ ಬಣ್ಣದ ಸೀರೆಯಲ್ಲಿ ಮಿಂಚಿದರು. 
 
ಪ್ರಿಯಾಂಕಾ ಮತ್ತು ಸಿಂಗರ್ ನಿಕ್ 2018 ರಲ್ಲಿ ರಾಜಸ್ಥಾನದಲ್ಲಿ ವಿವಾಹವಾದರು. ಅವರು 2022 ರಲ್ಲಿ ಮಗಳು ಮಾಲ್ತಿ ಅವರನ್ನು ಸ್ವಾಗತಿಸಿದರು. 

Share this Story:

Follow Webdunia kannada

ಮುಂದಿನ ಸುದ್ದಿ

ಗೆಳೆಯನ ಜತೆ ಹಸೆಮಣೆ ಏರಿದ 'ಗೂಗ್ಲಿ' ಬೆಡಗಿ ಕೃತಿ ಕರಬಂಧ