Select Your Language

Notifications

webdunia
webdunia
webdunia
webdunia

ಆಲಿಯಾ ಬದುಕಲ್ಲಿ ರಾಹಾ ಆಗಮನ 'ಹೊಸ ಅಧ್ಯಾಯ': ಮಗಳ ತಾಯ್ತನವನ್ನು ಕೊಂಡಾಡಿದ ಮಹೇಶ್ ಭಟ್

Alia Bhat

Sampriya

ಮುಂಬೈ , ಶುಕ್ರವಾರ, 15 ಮಾರ್ಚ್ 2024 (19:52 IST)
Photo Courtesy Facebook
ಮುಂಬೈ: ಬಾಲಿವುಡ್ ಕ್ಯೂಟ್ ಬೆಡಗಿ ನಟಿ ಆಲಿಯಾ ಭಟ್ ಇಂದು ತಮ್ಮ 31ನೇ ವರ್ಷದ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ವಿಶೇಷ ದಿನದಂದು ನಟಿಗೆ ಸಾಮಾಜಿಕ ಜಾಲತಾಣದಲ್ಲಿ ಶುಭಾಶಯಗಳ ಸುರಿಮಳೆ ಬಂದಿದೆ. ಅದಲ್ಲದೆ ಮಗಳು ರಾಹಾ ಕಪೂರ್ ಜತೆಗಿನ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 
 
ಇನ್ನೂ ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಆಲಿಯಾ ಭಟ್ ತಂದೆ ನಿರ್ದೇಶಕ ಮಹೇಶ್ ಭಟ್ ಅವರು ತಮ್ಮ ಮಗಳ ಬಗ್ಗೆ ಮೆಚ್ಚುಗೆಯ ಸುರಿಮಳೆಗೈದಿದ್ದಾರೆ.  ಆಲಿಯಾಳ ಜೀವನದಲ್ಲಿ ಅತ್ಯಂತ ರೋಮಾಂಚನಕಾರಿ ಅಧ್ಯಾಯ ಎಂದರೆ ಅವಳ ಮಾತೃತ್ವದ ಪ್ರಯಾಣ. ಮಗು ಬಂದ ಮೇಲೆ ಅವಳ ಸಂಪೂರ್ಣ ವ್ಯಕ್ತಿತ್ವದಲ್ಲಿ ಬದಲಾವಣೆಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. 
 
ಇದೀಗ ಅವಳ ಮನಸ್ಸು ಆಕಾಶದಷ್ಟು ವಿಶಾಲವಾಗಿದ್ದು. ಆಕೆಯ ತಾಯ್ತನವೂ ಸಹಾನುಭೂತಿ, ಬುದ್ಧಿವಂತಿಕೆಯಿಂದ ಆಕೆಯನ್ನು ಆವರಿಸಿದೆ ಎಂದು ಮಗಳ ಬಗ್ಗೆ ಹೆಮ್ಮೆಯಿಂದ ಹೇಳಿಕೊಂಡರು. 
 
ಬಾಲಿವುಡ್ ಖ್ಯಾತ ನಟ ರಣಬಿರ್ ಜತೆ ಪ್ರೀತಿಯಲ್ಲಿದ್ದ  ಆಲಿಯಾ ಭಟ್ 2022ರಲ್ಲಿ ವಿವಾಹವಾದರು. ಅದೇ ವರ್ಷ ಈ ಜೋಡಿ ಮೊದಲ ಮಗುವನ್ನು ಬರಮಾಡಿಕೊಂಡಿತು. ಮಗಳಿಗೆ ರಾಹಾ ಕಪೂರ್ ಎಂದು ನಾಮಕರಣ ಮಾಡಿದ್ದರು. ಇದೀಗ ರಣಬೀರ್ ಹಾಗೂ ಆಲಿಯಾ ತಮ್ಮ ಮಗಳ ಜತೆ ಸುಂದರ ಕ್ಷಣಗಳನ್ನು ಕಳೆಯುತ್ತಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ಶುರುವಾಗಿದೆ ಮತ್ತೊಂದು ಕ್ರಿಕೆಟ್‌- ಬಾಲಿವುಡ್ ಲವ್‌ಸ್ಟೋರಿ: 8 ವರ್ಷ ಕಿರಿಯ ಕ್ರಿಕೆಟಿಗನ ಜತೆ ಶ್ರದ್ಧಾ ಲವ್