Select Your Language

Notifications

webdunia
webdunia
webdunia
Wednesday, 16 April 2025
webdunia

ಗೆಳೆಯನ ಜತೆ ಹಸೆಮಣೆ ಏರಿದ 'ಗೂಗ್ಲಿ' ಬೆಡಗಿ ಕೃತಿ ಕರಬಂಧ

Kriti Karabandha

Sampriya

ಮುಂಬೈ , ಶನಿವಾರ, 16 ಮಾರ್ಚ್ 2024 (16:29 IST)
Photo Courtesy Instagram
ಮುಂಬೈ: ಕನ್ನಡದ ಚಿರು, ಗೂಗ್ಲಿ ಚಿತ್ರದಲ್ಲಿ ನಟಿಸಿ ಕನ್ನಡಿಗರ ಮನಸ್ಸನ್ನು ಗೆದ್ದ, ಸದ್ಯ ಬಾಲಿವುಡ್ ಚಿತ್ರಗಳಲ್ಲಿ ಬ್ಯುಸಿಯಾಗಿರುವ ನಟಿ ಕೃತಿ ಕರಬಂಧ ತಮ್ಮ ಗೆಳೆಯ ನಟ ಪುಲ್ಕಿತ್ ಸಾಮ್ರಾಟ್ ಜತೆ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
 
ತೆಲುಗಿನ ಬೋನಿ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ಕೃತಿ, 2010ರಲ್ಲಿ ದಿವಂಗತ ನಟ ಚಿರಂಜೀವಿ ಸರ್ಜಾ ಜತೆ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. 2013ರಲ್ಲಿ ಬಿಡುಗಡೆಗೊಂಡ  ನಟ ಯಶ್ ನಟನೆಯ 'ಗೂಗ್ಲಿ' ಸಿನಿಮಾದಲ್ಲಿ ಕೃತಿ  ಕ್ಯೂಟ್‌ ನಟನೆಗೆ ಕನ್ನಡಿಗರು ಫಿದಾ ಆಗಿದ್ದರು. 
 
ನಂತರ ಕನ್ನಡದಲ್ಲಿ ಶಿವರಾಜ್‌ಕುಮಾರ್ ಜೊತೆ 'ಬೆಳ್ಳಿ', ಉಪೇಂದ್ರ ಜೊತೆ 'ಸೂಪರ್ ರಂಗ' ಚಿತ್ರದಲ್ಲಿಯೂ ನಟಿಸಿದ್ದರು. 2019ರಲ್ಲಿ ಬಾಲಿವುಡ್‌ಗೆ ಕಾಲಿಟ್ಟಿದ್ದ ಕೃತಿ, 'ರಾಜ್: ರಿಬೂಟ್' ಚಿತ್ರದಲ್ಲಿ ನಟಿಸಿದ್ದರು. ಸದ್ಯ ಬಾಲಿವುಡ್‌ ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದಾರೆ.  
 
'ಪಾಗಲ್‌ಪಂತಿ' ಚಿತ್ರೀಕರಣದ ವೇಳೆ ಪುಲ್ಕಿತ್ ಅವರನ್ನು ಕೃತಿ ಭೇಟಿಯಾಗಿದ್ದರು. ಇವರಿಬ್ಬರ ಸ್ನೇಹ ಪ್ರೀತಿಯಾಗಿ ಇಬ್ಬರೂ ಪ್ರೀತಿಯಲ್ಲಿರುವುದಾಗಿ ಹೇಳಿಕೊಂಡಿದ್ದರು. ಅದಲ್ಲದೆ ಈ ಜೋಡಿ ಈ ತಿಂಗಳಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿತ್ತು. ಇದೀಗ ಪ್ರೀತಿಸಿದ ಹುಡುಗನನ್ನು ಮದುವೆಯಾಗಿರುವ ಕೃತಿ ಅವರು ತಮ್ಮ ಮದುವೆಯ ಸುಂದರ ಕ್ಷಣಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. 
 
ಈ ಜೋಡಿ ಈ ಹಿಂದೆ ಒಟ್ಟಾಗಿ ಕಾಣಿಸಿಕೊಂಡಿದ್ದು, ಿಬ್ಬರು ಪ್ರೀತಿಯಲ್ಲಿದ್ದಾರೆಂಬ ಸುದ್ದಿ ಹರಿದಾಡಿತ್ತು. ಈ ವಿಷಯ ಕೆಲ ದಿನಗಳ ನಂತರ ಅಧಿಕೃತವಾಗಿ ಹೇಳಿದ್ದರು. 
 
 

Share this Story:

Follow Webdunia kannada

ಮುಂದಿನ ಸುದ್ದಿ

ಅಮಿತಾಭ್ ಬಚ್ಚನ್ ಅನಾರೋಗ್ಯವೆಲ್ಲಾ ಸುಳ್ಳೋ ಸುಳ್ಳು