Select Your Language

Notifications

webdunia
webdunia
webdunia
webdunia

ಅಮಿತಾಬ್‌ ಬಚ್ಚನ್ ಆಸ್ಪತ್ರೆಯಿಂದ ಡಿಸ್ಚಾರ್ಜ್: ಆಂಜಿಯೋಪ್ಲಾಸ್ಟಿ ನಂತ್ರ ಮನೆಯಲ್ಲೇ ಸುಧಾರಿಸುತ್ತಿರುವ ಬಿಗ್‌ ಬಿ

Amitabh Bacchan

Sampriya

ಮುಂಬೈ , ಶುಕ್ರವಾರ, 15 ಮಾರ್ಚ್ 2024 (20:23 IST)
Photo Courtesy Facebook
ಮುಂಬೈ: ಕಾಲಿನ ರಕ್ತನಾಳಗಳಲ್ಲಿ ಸಮಸ್ಯೆಯಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದ ಬಾಲಿವುಡ್ ಹಿರಿಯ ನಟ, ಬಿಗ್‌ ಬಿ ಖ್ಯಾತಿಯ ನಟ ಅಮಿತಾಬ್ ಬಚ್ಚನ್ ಅವರು ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
 
ಇಂದು ಬೆಳಿಗ್ಗೆ ಅನಾರೋಗ್ಯದ ಹಿನ್ನೆಲೆ ಮುಂಬೈನ ಕೋಕಿಲಾಬೆನ್ ಅಂಬಾನಿ ಆಸ್ಪತ್ರೆಗೆ ದಾಖಲಾಯಿಸಲಾಯಿತು.  81 ವರ್ಷದ ಅಮಿತಾಬ್‌ಗೆ ಕಾಲಿನ ರಕ್ತನಾಳಗಳಲ್ಲಿ ಸಮಸ್ಯೆ ಇರುವುದರಿಂದ ಆಂಜಿಯೋಪ್ಲಾಸ್ಟಿ ಮಾಡಲಾಗಿದೆ. ಆರೋಗ್ಯವಾಗಿದ್ದು ಅವರು ಮನೆಗೆ ಮರಳಿದ್ದಾರೆ ಮತ್ತು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಆಸ್ಪತ್ರೆಯ ಅಧಿಕಾರಿಗಳು ಹೇಳಿದ್ದಾರೆ. 
 
 ಅಮಿತಾಭ್ ಬಚ್ಚನ್ ಅವರು ಕೆಲವು ಗಂಟೆಗಳ ಹಿಂದೆ ಟ್ವೀಟ್ ಮಾಡಿ, "ಕೃತಜ್ಞತೆಯಲ್ಲಿ ಎಂದೆಂದಿಗೂ ..",  ಎಂದು ಬರೆದುಕೊಂಡಿದ್ದಾರೆ. ಇನ್ನು ಅಮಿತಾಭ್ ಆಸ್ಪತ್ರೆಗೆ ದಾಖಲಾಗುತ್ತಿದ್ದ ಹಾಗೆ ಅಭಿಮಾನಿಗಳು ಶೀಘ್ರವೇ ಗುಣಮುಖರಾಗಿ ಬನ್ನೀ ಎಂದು ಪ್ರಾರ್ಥಿಸಿದ್ದರು. 
 
ಸಿನಿಮಾ ಕ್ಷೇತ್ರದಲ್ಲಿ ಬೇಡಿಕೆ ಇರಿಸಿಕೊಂಡಿರುವ ಅಮಿತಾಬ್‌ ಹಲವಾರು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಸದ್ಯ ಅವರು ಪ್ರಭಾಸ್​ ನಟನೆಯ 'ಕಲ್ಕಿ'ಯಲ್ಲಿ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ರಜನಿಕಾಂತ್​ ನಾಯಕ ನಟರಾಗಿರುವ 'ವೆಟ್ಟೈಯಾನ್' ಸಿನಿಮಾದಲ್ಲೂ ಅಮಿತಾಭ್​ ನಟಿಸುತ್ತಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ಆಲಿಯಾ ಬದುಕಲ್ಲಿ ರಾಹಾ ಆಗಮನ 'ಹೊಸ ಅಧ್ಯಾಯ': ಮಗಳ ತಾಯ್ತನವನ್ನು ಕೊಂಡಾಡಿದ ಮಹೇಶ್ ಭಟ್