Select Your Language

Notifications

webdunia
webdunia
webdunia
webdunia

ಐಶ್ವರ್ಯಾ ರೈ ಬಗ್ಗೆ ಕಾಮೆಂಟ್ ಮಾಡಿದ್ದಕ್ಕೆ ರಾಹುಲ್ ಗಾಂಧಿಗೆ ಅಮಿತಾಭ್ ಬಚ್ಚನ್ ಟಾಂಗ್

Amitabh Bacchan-Rahul Gandhi

Krishnaveni K

ಮುಂಬೈ , ಗುರುವಾರ, 22 ಫೆಬ್ರವರಿ 2024 (13:15 IST)
ಮುಂಬೈ: ಭಾರತ್ ಜೋಡೋ ಯಾತ್ರೆಯಲ್ಲಿ ಐಶ್ವರ್ಯಾ ರೈ ಬಚ್ಚನ್ ಬಗ್ಗೆ ಕೇವಲವಾಗಿ ಮಾತನಾಡಿದ್ದಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಅಮಿತಾಭ್ ಬಚ್ಚನ್ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ.

ಭಾರತ್ ಜೋಡೋ ಯಾತ್ರೆ ವೇಳೆ ಎರಡು ಬಾರಿ ರಾಮಮಂದಿರ ಉದ್ಘಾಟನೆ ಕಾರ್ಯಕ್ರಮಕ್ಕೆ ಹೋಗಿದ್ದ ಅಮಿತಾಭ‍್ ಬಚ್ಚನ್ ಬಗ್ಗೆ ಮತ್ತು ಅವರ ಸೊಸೆ, ನಟಿ ಐಶ್ವರ್ಯಾ ರೈ ಬಗ್ಗೆ ರಾಹುಲ್ ಗಾಂಧಿ ಲೇವಡಿ ಮಾಡಿದ್ದರು. ಐಶ್ವರ್ಯಾ ರಾಮಮಂದಿರ ಉದ್ಘಾಟನೆಗೆ ಹೋಗಿರಲಿಲ್ಲ. ಹಾಗಿದ್ದರೂ ಹೋಗಿದ್ದರು ಎಂಬಂತೆ ಮಾತನಾಡಿದ್ದರು.

ಮತ್ತೊಮ್ಮೆ ಐಶ್ವರ್ಯಾ ರೈ ಬಗ್ಗೆಯೇ ರಾಹುಲ್ ಗಾಂಧಿ ಕಾಮೆಂಟ್ ಮಾಡಿದ್ದು, ‘ಕುಣಿಯುವವಳು’ (ನಾಚ್ ನೇ ವಾಲಿ) ಎಂದು ಕೇವಲವಾಗಿ ಮಾತನಾಡಿದ್ದರು. ರಾಹುಲ್ ಕಾಮೆಂಟ್ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಇದೀಗ ಬಿಗ್ ಬಿ ಅಮಿತಾಭ್ ಕೂಡಾ ಸೊಸೆ ಮತ್ತು ತನ್ನ ಬಗ್ಗೆ ಮಾತನಾಡಿದ ರಾಹುಲ್ ಗಾಂಧಿಗೆ ಪರೋಕ್ಷವಾಗಿ ಟಾಂಗ್ ಕೊಟಟಿದ್ದಾರೆ. ‘ಎಲ್ಲ ಜಂಜಾಟಗಳನ್ನು ಬದಿಗೊತ್ತಿ ಸಂಜೆ ವೇಳೆ ದೈಹಿಕ ಮತ್ತು ಮಾನಸಿಕ ಆರೋಗ್ಯದತ್ತ ಗಮನ ಹರಿಸುತ್ತಿದ್ದೇನೆ’ ಎಂದಿದ್ದಾರೆ.

ಪ್ರಯಾಗ್ ರಾಜ್ ನಲ್ಲಿ ಭಾರತ್ ಜೋಡೋ ಯಾತ್ರೆ  ವೇಳೆ ರಾಹುಲ್ ಗಾಂಧಿ ತಮ್ಮ ಭಾಷಣದ ನಡುವೆ ಅಯೋಧ್ಯೆ ರಾಮಮಂದಿರ ಉದ್ಘಾಟನೆಗೆ ಅಮಿತಾಭ್ ಬಚ್ಚನ್, ಐಶ್ವರ್ಯಾ ರೈ, ಪ್ರಧಾನಿ ಮೋದಿ ಬಂದಿದ್ದರು. ಆದರೆ ಅಲ್ಲಿ ಯಾರಾದರೂ ಹಿಂದುಳಿದ ವರ್ಗದವರು ಇದ್ದಿದ್ದನ್ನು ನೋಡಿದ್ದೀರಾ ಎಂದು ವಾಗ್ದಾಳಿ ನಡೆಸಿದ್ದರು. ಅಸಲಿಗೆ ಐಶ್ವರ್ಯಾ ರಾಮಮಂದಿರ ಉದ್ಘಾಟನೆ ಕಾರ್ಯಕ್ರಮಕ್ಕೆ ಹೋಗಿಯೇ ಇರಲಿಲ್ಲ. ಮತ್ತೊಮ್ಮೆ ಮಾಧ್ಯಮಗಳು ಕೇವಲ ಐಶ್ವರ್ಯಾ ರೈ ಡ್ಯಾನ್ಸ್ ಮಾಡುವುದನ್ನು, ಪ್ರಧಾನಿ ಮೋದಿಯನ್ನು ಮಾತ್ರ ತೋರಿಸುತ್ತಾರೆ ಎಂದಿದ್ದರು. ಹೀಗೆ ವಿನಾಕಾರಣ ತಮ್ಮ ಭಾಷಣಗಳಲ್ಲಿ ಐಶ‍್ವರ್ಯಾರನ್ನು ಎಳೆದು ತರುತ್ತಿರುವುದಕ್ಕೆ ಆಕ್ರೋಶ ವ್ಯಕ್ತವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ಸಿದ್ದರಾಮಯ್ಯಗೆ ಲಂಚ ಪ್ರಕರಣದ ಸಂಕಷ್ಟ