Select Your Language

Notifications

webdunia
webdunia
webdunia
Wednesday, 9 April 2025
webdunia

ಆಫ್ ಸ್ಕ್ರೀನ್ ನ ರೊಮ್ಯಾಂಟಿಕ್ ಫೋಟೋ ಹಂಚಿಕೊಂಡ ರಾಮಚಾರಿ-ಚಾರು, ಮದುವೆ ಯಾವಾಗ ಎಂದ ಫ್ಯಾನ್ಸ್

Ramachari

Krishnaveni K

ಬೆಂಗಳೂರು , ಮಂಗಳವಾರ, 14 ಮೇ 2024 (10:38 IST)
Photo Courtesy: Instagram
ಬೆಂಗಳೂರು: ರಾಮಚಾರಿ ಧಾರವಾಹಿಯ ಚಾರು-ಚಾರಿ ಜೋಡಿ ಎಂದರೆ ಕಿರುತೆರೆ ಪ್ರೇಕ್ಷಕರಿಗೆ ಚಿರಪರಿಚಿತ. ಇದೀಗ ಚಾರು ಅಲಿಯಾಸ್ ನಟಿ ಮೌನ ಗುಡ್ಡೆಮನೆ ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸಿದ ಫೋಟೋವೊಂದು ಜನರ ಗಮನ ಸೆಳೆದಿದೆ.

ಇಬ್ಬರೂ ತೆರೆ ಮೇಲೆ ಉತ್ತಮ ಜೋಡಿ ಎನಿಸಿಕೊಂಡಿದ್ದಾರೆ. ಕಲರ್ಸ್ ಅನುಬಂಧ ಅವಾರ್ಡ್ಸ್ ನಲ್ಲಿ ಜನ ಮೆಚ್ಚಿದ ಜೋಡಿ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಚಾರು ತುಂಟಾಟ, ಚಾರಿ ಗಾಂಭೀರ್ಯವನ್ನು ನೋಡಲು ಕಾಯುವ ಪ್ರೇಕ್ಷಕರ ಬಳಗವೇ ಇದೆ. ಈ ಜೋಡಿ ಆಫ್ ಸ್ಕ್ರೀನ್ ನಲ್ಲಿ ಉತ್ತಮ ಸ್ನೇಹ ಸಂಬಂಧ ಹೊಂದಿದ್ದಾರೆ.

ರಾಮಚಾರಿ ಪಾತ್ರ ಮಾಡುತ್ತಿರುವ ರಿತ್ವಿಕ್ ಕೃಪಾಕರ್ ಜೊತೆಗೆ ರೊಮ್ಯಾಂಟಿಕ್ ಫೋಟೋಗಳನ್ನು ಚಾರು ಪಾತ್ರ ಮಾಡುತ್ತಿರುವ ನಟಿ ಮೌನ ಗುಡ್ಡೆಮನೆ ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ರಾಮಚಾರಿ ಶೂಟಿಂಗ್ ವೇಳೆ ಆಫ್ ಸ್ಕ್ರೀನ್ ನಲ್ಲಿ ಇಬ್ಬರೂ ಸುಂದರ ಕ್ಷಣ ಕಳೆದ ಫೋಟೋಗಳವು.

ಈ ಫೋಟೋ ನೋಡಿದ ನೆಟ್ಟಿಗರು ನಿಮ್ಮ ಮದುವೆ ಯಾವಾಗ ಎಂದು ಪ್ರಶ್ನೆ ಹಾಕಿದ್ದಾರೆ. ನಿಮ್ಮ ಜೋಡಿ ಸೂಪರ್ ಆಗಿದೆ. ನೀವು ತೆರೆ ಮೇಲೆ ಮಾತ್ರವಲ್ಲ, ನಿಜ ಜೀವನದಲ್ಲೂ ಮದುವೆಯಾದರೆ ಜೋಡಿ ಚೆನ್ನಾಗಿರುತ್ತದೆ. ನಮಗೋಸ್ಕರ ನಿಜ ಜೀವನದಲ್ಲೂ ನೀವು ಒಂದಾಗಿ ಎಂದು ಹೇಳಿದ್ದಾರೆ.

ರಿತ್ವಿಕ್ ಈ ಮೊದಲು ಒಬ್ಬಾಕೆಯ ಜೊತೆ ಬ್ರೇಕಪ್ ಆಗಿ ಈಗ ಸಿಂಗಲ್ ರೆಡಿ ಟು ಮಿಂಗಲ್ ಎಂದು ಹೇಳಿಕೊಂಡಿದ್ದರು. ಮೌನ ಕೂಡಾ ಇದುವರೆಗೆ ನಾನು ಸಿಂಗಲ್ ಎಂದೇ ಹೇಳಿಕೊಂಡು ಬಂದಿದ್ದಾರೆ. ನೀವಿಬ್ಬರೂ ಒಂದಾಗಿ ಎಂದು ಹೇಳುವ ಅಭಿಮಾನಿಗಳು ನಾವಿಬ್ಬರೂ ಒಳ್ಳೆಯ ಫ್ರೆಂಡ್ಸ್ ಅದು ಬಿಟ್ಟು ಬೇರೇನೂ ಇಲ್ಲ ಎಂದು ಇಬ್ಬರೂ ಹೇಳುತ್ತಲೇ ಬಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ವೈಷ್ಣವಿ ಗೌಡಗೆ ದಂಡ ಪ್ರಕರಣ: ತೆರೆ ಮೇಲೆ ಕ್ರೈಂ ಮಾಡೋರ ಮೇಲೆಲ್ಲಾ ಕೇಸ್ ತಗೋತೀರಾ ಅಂತ ನೆಟ್ಟಿಗರ ಟೀಕೆ