Publish Date: Sat, 27 Apr 2024 (08:54 IST)
Updated Date: Sat, 27 Apr 2024 (08:56 IST)
Photo Courtesy: Instagram
ಬೆಂಗಳೂರು: ನಿನ್ನೆ ಕರ್ನಾಟಕದಲ್ಲಿ ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನ ಪ್ರಕ್ರಿಯೆ ನಡೆದಿತ್ತು. ಕೆಲವು ಕಡೆ ಮತದಾನ ಪ್ರಕ್ರಿಯೆಯಲ್ಲಿ ಕೆಲವು ಅಪರೂಪದ ವಿದ್ಯಮಾನಗಳು ನಡೆದವು.
ಗೀತಾ ಧಾರವಾಹಿ ಮೂಲಕ ಕಿರುತೆರೆಯಲ್ಲಿ ತಮ್ಮದೇ ಅಭಿಮಾನಿ ವರ್ಗದವರನ್ನು ಹೊಂದಿರುವ ನಟ ಧನುಷ್ ಗೌಡ ನಿನ್ನೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಆದರೆ ತಮ್ಮ ಮದುವೆ ದಿನವೂ ಧನುಷ್ ವೋಟ್ ಮಾಡುವುದನ್ನು ಮರೆತಿಲ್ಲ. ಮದುವೆ ದಿನವೂ ವೋಟ್ ಮಾಡಿರುವುದಾಗಿ ತಮ್ಮ ಇನ್ ಸ್ಟಾಗ್ರಾಂ ಪುಟದಲ್ಲಿ ಫೋಟೋಪ್ರಕಟಿಸಿದ್ದಾರೆ.
ಇದಕ್ಕೆ ನೆಟ್ಟಿಗರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಎಷ್ಟೋ ಜನ ಉದಾಸೀನ ಪ್ರವೃತ್ತಿ ತೋರಿ ವೋಟ್ ಹಾಕದೇ ವೀಕೆಂಡ್ ರಜೆ ಎಂದು ಫ್ಯಾಮಿಲಿ ಸಮೇತ ಪ್ರವಾಸ ಹೋಗಿದ್ದು ಇದೆ. ಆದರೆ ಧನುಷ್ ತಮ್ಮ ಮದುವೆ ಇದ್ದುಕೊಂಡು ತಪ್ಪದೇ ತಮ್ಮ ಮತದಾನದ ಹಕ್ಕು ಚಲಾಯಿಸಿದ್ದಾರೆ.
ತಮ್ಮ ಗೆಳತಿ ಸಂಜನಾ ಜೊತೆಗೆ ಧನುಷ್ ನಿನ್ನೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಮದುವೆಗೆ ಅವರ ಸಿನಿ ಸ್ನೇಹಿತರು. ಕುಟುಂಬಸ್ಥರು ಸಾಕ್ಷಿಯಾಗಿದ್ದಾರೆ. ಮದುವೆ ಫೋಟೋಗಳನ್ನು ಧನುಷ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ಈ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿತ್ತು.