Select Your Language

Notifications

webdunia
webdunia
webdunia
webdunia

ಡಿವೋರ್ಸ್ ಪ್ರಕರಣಕ್ಕೆ ಕೋರ್ಟ್ ಗೆ ಹೋದ್ರೆ ಜೈಲು ಶಿಕ್ಷೆ: ಟ್ರೋಲ್ ಆದ ಪುಟ್ಟಕ್ಕನ ಮಕ್ಕಳು ಸೀರಿಯಲ್

Puttakkana Makkalu

Krishnaveni K

ಬೆಂಗಳೂರು , ಶುಕ್ರವಾರ, 26 ಏಪ್ರಿಲ್ 2024 (15:05 IST)
Photo Courtesy: Instagram
ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಜನಪ್ರಿಯ ಪುಟ್ಟಕ್ಕನ ಮಕ್ಕಳು ಧಾರವಾಹಿ ಈಗ ಸೋಷಿಯಲ್ ಮೀಡಿಯಾದಲ್ಲಿ ತೀವ್ರ ಟ್ರೋಲ್ ಗೊಳಗಾಗಿದೆ.

ಧಾರವಾಹಿಯಲ್ಲಿ ಈಗ ಪುಟ್ಟಕ್ಕನ ಹಿರಿಯ ಮಗಳು ಸಹನಾ ಮತ್ತು ಆಕೆಯ ಗಂಡ ಮುರಳಿ ನಡುವೆ ವಿಚ್ಛೇದನ ಪ್ರಕ್ರಿಯೆ ಕೋರ್ಟ್ ನಲ್ಲಿ ನಡೆಯುತ್ತಿದೆ. ಸಹನಾಗೆ ಆಕೆಯ ಅತ್ತೆ ಊಟದಲ್ಲಿ ವಿಷ ಹಾಕಿ ಸಾಯಿಸಲು ಪ್ಲ್ಯಾನ್ ಮಾಡಿದ್ದರು. ಆದರೆ ಈ ದೃಶ್ಯಗಳು ಮೊಬೈಲ್ ನಲ್ಲಿ ಸೆರೆಹಿಡಿದಿದ್ದರೂ ಡಿಲೀಟ್ ಆಗಿತ್ತು. ಹೀಗಾಗಿ ಸಹನಾ ಬಳಿ ಯಾವುದೇ ಸಾಕ್ಷಿಯಿರಲಿಲ್ಲ.

ಹೀಗಾಗಿ ಪ್ರಕರಣದ ಬಗ್ಗೆ ತೀರ್ಪು ನೀಡಿದ ನ್ಯಾಯಾಧೀಶರು ಸಹನಾಗೆ 7 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಲಾಗುವುದು ಎಂದು ತೀರ್ಪು ಓದುತ್ತಾರೆ. ಧಾರವಾಹಿಯ ಈ ದೃಶ್ಯಕ್ಕೆ ವ್ಯಾಪಕ ಟೀಕೆ ಕೇಳಿಬಂದಿದೆ. ಈ ಸ್ಕ್ರಿಪ್ಟ್ ಬರೆದವರಿಗೆ ಕನಿಷ್ಠ ಜ್ಞಾನವೂ ಇಲ್ಲವೇ ಎಂದು ಜರೆದಿದ್ದಾರೆ.

ಸಾಕ್ಷಿ ನೀಡಲು ಸಾಬೀತಾದರೆ ಇಷ್ಟೊಂದು ವರ್ಷದ ಶಿಕ್ಷೆ ನೀಡುತ್ತಾರಾ ಎಂದು ಕೆಲವರು ಪ್ರಶ್ನಿಸಿದರೆ ವಿಚ್ಛೇದನಕ್ಕೆಂದು ಕೌಟುಂಬಿಕ ನ್ಯಾಯಾಲಯಕ್ಕೆ ಹೋದರೆ ಅಲ್ಲಿ ಇನ್ನೊಂದು ಪ್ರಕರಣಕ್ಕೆ ಜೈಲು ಶಿಕ್ಷೆ ವಿಧಿಸುವ ಅವಕಾಶ ನ್ಯಾಯಾಧೀಶರಿಗೆ ಇಲ್ಲವೇ ಇಲ್ಲ. ಹೀಗಿರುವಾಗ ಇಂತಹ ತಲೆಬುಡವಿಲ್ಲದ ಸ್ಕ್ರಿಪ್ಟ್ ಬರೆದಿರುವುದು ಯಾಕೋ ಎಂದು ನೆಟ್ಟಿಗರು ಟೀಕೆ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಭಿಮಾನಿ ಮೇಲೆ ಸಿಟ್ಟಿಗೆದ್ದ ಜ್ಯೂ ಎನ್ ಟಿಆರ್