Select Your Language

Notifications

webdunia
webdunia
webdunia
webdunia

ಬಾವನ ಜೊತೆ ಪುಟ್ಟಕ್ಕನ ಮಕ್ಕಳು ಖ್ಯಾತಿಯ ಸ್ನೇಹ ಡ್ಯುಯೆಟ್

Sanjana Burli

Krishnaveni K

ಬೆಂಗಳೂರು , ಭಾನುವಾರ, 14 ಜನವರಿ 2024 (10:39 IST)
Photo Courtesy: Instagram
ಬೆಂಗಳೂರು: ಪುಟ್ಟಕ್ಕನ ಮಕ್ಕಳು ಧಾರವಾಹಿಯಲ್ಲಿ ಸ್ನೇಹ ಪಾತ್ರದ ಮೂಲಕ ಮನೆ ಮಾತಾಗಿರುವ ನಟಿ ಸಂಜನಾ ಈಗ ಅದೇ ಧಾರವಾಹಿಯಲ್ಲಿ ಬಾವನ ಪಾತ್ರ ಮಾಡುತ್ತಿರುವ ಪವನ್ ಕುಮಾರ್ ಜೊತೆ ಡ್ಯುಯೆಟ್ ಹಾಡುತ್ತಿದ್ದಾರೆ!

ಆದರೆ ಇದು ನಡೆಯುತ್ತಿರುವುದು ನಿಜ ಜೀವನದಲ್ಲಿ ಅಲ್ಲ. ಲವ್ ರಿ ಸೆಟ್ ಎನ್ನುವ ಶಾರ್ಟ್ ಮೂವಿಯಲ್ಲಿ. ಪುಟ್ಟಕ್ಕನ ಮಕ್ಕಳು ಧಾರವಾಹಿಯಲ್ಲಿ ಬಾವ-ನಾದಿನಿ ಪಾತ್ರ ಮಾಡುತ್ತಿರುವ ಇಬ್ಬರೂ ಲವ್ ರಿ ಸೆಟ್ ಎನ್ನುವ ಕಿರು ಚಿತ್ರದಲ್ಲಿ ಜೋಡಿಯಾಗಿ ನಟಿಸಿದ್ದಾರೆ.

ಹೆಸರೇ ಹೇಳುವಂತೆ ಇದೊಂದು ರೊಮ್ಯಾಂಟಿಕ್ ಕಥಾಹಂದರದ ಶಾರ್ಟ್ ಮೂವಿ. ಇಬ್ಬರೂ ಹಾಡಿನಲ್ಲಿ ಸಖತ್ ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡಿದ್ದಾರೆ. ಆದರೆ ಧಾರವಾಹಿಯ ಬಾವ-ನಾದಿನಿ ಜೋಡಿ ಈ ಸಿನಿಮಾದಲ್ಲಿ ಲವ್ವರ್ಸ್ ಆಗಿ ಕಾಣಿಸಿಕೊಂಡಿರುವುದು ನೋಡಿ ನೆಟ್ಟಿಗರು ಸಖತ್ ಫನ್ನಿಯಾಗಿ ಕಾಮೆಂಟ್ ಮಾಡುತ್ತಿದ್ದಾರೆ. ಧಾರವಾಹಿ ಹೀರೋ ಕಂಠಿಗೆ ಮೋಸ ಮಾಡ್ತಿದ್ದೀರಿ ಎಂದು ಎಲ್ಲರೂ ಕಾಲೆಳೆಯುತ್ತಿದ್ದಾರೆ.

ಅಂದ ಹಾಗೆ ಈ ಕಿರು ಚಿತ್ರದ ಟೀಸರ್ ಜನವರಿ 15 ಕ್ಕೆ ಅಂದರೆ ನಾಳೆ ರಿಲೀಸ್ ಆಗುತ್ತಿದೆ. ಈ ಕಿರು ಚಿತ್ರ 7 ಶೇಡ್ ಸ್ಟುಡಿಯೋಸ್ ಯೂ ಟ್ಯೂಬ್ ಚಾನೆಲ್ ನಲ್ಲಿ ಜನವರಿ 22 ರಂದು ಬಿಡುಗಡೆಯಾಗುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

BBK10: ಹೊರಬಿದ್ದ ವರ್ತೂರು ಸಂತೋಷ್, ತುಕಾಲಿ ಕಣ್ಣೀರು