Publish Date: Sun, 14 Jan 2024 (09:55 IST)
Updated Date: Sun, 14 Jan 2024 (09:57 IST)
ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 10 ರಲ್ಲಿ ಕುಚಿಕು ಗೆಳೆಯರಂತಿದ್ದ ವರ್ತೂರು ಸಂತೋಷ್ ಮತ್ತು ತುಕಾಲಿ ಸಂತೋಷ್ ಜೋಡಿ ಬೇರ್ಪಟ್ಟಿದೆ.
ಸಂತೋಷ್ ಧ್ವಯರ ಪೈಕಿ ಇದೀಗ ವರ್ತೂರು ಸಂತೋಷ್ ಮನೆಯಿಂದ ಹೊರಬಿದ್ದಿದ್ದಾರೆ. ಈ ವಾರ ವರ್ತೂರು ಸಂತೋಷ್ ಎಲಿಮಿನೇಟ್ ಆಗುತ್ತಿರುವ ಸುದ್ದಿ ಕೇಳಿ ತುಕಾಲಿ ಸಂತೋಷ್ ಕಣ್ಣೀರಿಟ್ಟು ಬೀಳ್ಕೊಟ್ಟಿದ್ದಾರೆ.
ಇನ್ನು, ಫೈನಲ್ ಗೆ ಕೆಲವೇ ದಿನಗಳಿರುವಾಗ ವರ್ತೂರು ಸಂತೋಷ್ ಮನೆಯಿಂದ ಎಲಿಮಿನೇಟ್ ಆಗಿರುವುದು ಅವರ ಅಭಿಮಾನಿಗಳಿಗೆ ತೀವ್ರ ಬೇಸರ ತಂದಿದೆ. ವರ್ತೂರು ಫೈನಲ್ ನಲ್ಲಿರಲಿದ್ದಾರೆ ಎಂಬುದೇ ಎಲ್ಲರ ಲೆಕ್ಕಾಚಾರವಾಗಿತ್ತು. ಆದರೆ ಕೊನೆಯ ಕ್ಷಣದಲ್ಲಿ ಮನೆಯಿಂದ ಹೊರಬಿದ್ದಿರುವುದಕ್ಕೆ ಫ್ಯಾನ್ಸ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸೀಸನ್ ನಲ್ಲಿ ವರ್ತೂರು ಸಂತೋಷ್ ತಮ್ಮ ಖಾಸಗಿ ಸಮಸ್ಯೆಗಳಿಂದಲೇ ಸುದ್ದಿಯಾಗಿದ್ದರು. ಹುಲಿ ಉಗುರು ಪ್ರಕರಣದಲ್ಲಿ ಜೈಲಿಗೆ ಹೋಗಿ ಬಂದಿದ್ದ ವರ್ತೂರು ಸಂತೋಷ್ ಬಳಿಕ ಮದುವೆ ವಿಚಾರಕ್ಕೆ ಸುದ್ದಿಯಾದರು. ಅದಾದ ಬಳಿಕ ಮನೆಯಿಂದ ಹೊರಹೋಗುವುದಾಗಿ ಡ್ರಾಮಾವೇ ನಡೆದು ಹೋಯಿತು. ಇದೆಲ್ಲದರ ನಡುವೆಯೂ ಇತ್ತೀಚೆಗಿನ ವಾರಗಳಲ್ಲಿ ಅವರು ಉತ್ತಮ ಆಟವಾಡಿ ಜನರ ಮನಸ್ಸು ಗೆಲ್ಲಲು ಸಫಲರಾಗಿದ್ದರು.