Select Your Language

Notifications

webdunia
webdunia
webdunia
webdunia

BBK10: ಬಿಗ್ ಬಾಸ್ ದಂದೆ, ಅರ್ಧದಲ್ಲಿ ಬಿಟ್ರೆ 3 ಕೋಟಿ ಕೊಡ್ಬೇಕು! ಆರ್ಯವರ್ಧನ್ ಗುರೂಜಿ ಹೇಳಿಕೆ ವೈರಲ್

BBK10: ಬಿಗ್ ಬಾಸ್ ದಂದೆ, ಅರ್ಧದಲ್ಲಿ ಬಿಟ್ರೆ 3 ಕೋಟಿ ಕೊಡ್ಬೇಕು! ಆರ್ಯವರ್ಧನ್ ಗುರೂಜಿ ಹೇಳಿಕೆ ವೈರಲ್

Krishnaveni K

ಬೆಂಗಳೂರು , ಶುಕ್ರವಾರ, 5 ಜನವರಿ 2024 (13:07 IST)
ಬೆಂಗಳೂರು: ಬೆಂಗಳೂರು: ಬಿಗ್ ಬಾಸ್ ಕಳೆದ ಸೀಸನ್ ನಲ್ಲಿ ಸ್ಪರ್ಧಿಯಾಗಿದ್ದ ಆರ್ಯವರ್ಧನ್ ಗುರೂಜಿ ಶೋ ಬಗ್ಗೆ ಖಾಸಗಿ ವಾಹಿನಿಯೊಂದಕ್ಕೆ ಶಾಕಿಂಗ್ ವಿಚಾರಗಳನ್ನು ಹೇಳಿದ್ದಾರೆ.

ಬಿಗ್ ಬಾಸ್ ಸೀಸನ್ 10 ರಲ್ಲಿ ಸ್ಪರ್ಧಿ ಡ್ರೋಣ್ ಪ್ರತಾಪ್ ಆತ್ಮಹತ್ಯೆ ವದಂತಿ ಬೆನ್ನಲ್ಲೇ ಖಾಸಗಿ ವಾಹಿನಿಯೊಂದಕ್ಕೆ ಆರ್ಯವರ್ಧನ್ ಗುರೂಜಿ ಹೇಳಿಕೆ ನೀಡಿದ್ದಾರೆ.

ಬಿಗ್ ಬಾಸ್ ನಲ್ಲಿ ಊಟ, ತಿಂಡಿ ಪ್ಯಾಕೇಜ್ ನಲ್ಲಿ ಪ್ರತೀ ತಿಂಗಳು 1 ರಿಂದ ಒಂದೂವರೆ ಲಕ್ಷ ಉಳಿತಾಯ ಮಾಡ್ತಾರೆ. ಹೊಟ್ಟೆ ತುಂಬಾ ಊಟ ಕೊಡಲ್ಲ. ಟಾಸ್ಕ್ ಆಡಿಸಲಿ ಆದರೆ ಊಟ, ತಿಂಡಿ ಕೊಡಕ್ಕೆ ಏನು ಸಮಸ್ಯೆ? ಎಂದು ಪ್ರಶ್ನೆ ಮಾಡಿದ್ದಾರೆ.

ಎಲ್ಲಾದ್ರೂ ನಂಗೆ ಆಗ್ತಿಲ್ಲಪ್ಪಾ ಬಿಗ್ ಬಾಸ್ ಬಿಟ್ಟೋಗ್ತೀನಿ ಎಂದರೆ ಅಗ್ರಿಮೆಂಟಲ್ಲೇ ಅರ್ಧದಲ್ಲೇ ಬಿಟ್ಟೋದ್ರೆ 3 ಕೋಟಿ ಪರಿಹಾರ ಕೊಡಬೇಕು ಎಂದು ಸಣ್ಣದಾಗಿ ಬರೆಸಿ ಸಹಿ ಹಾಕಿಸಿರ್ತಾರೆ. ಹೀಗಾಗಿ ಯಾರೂ ಬಿಟ್ಟು ಹೋಗುವ ಧೈರ್ಯ ಮಾಡಲ್ಲ. ಮನೆಯಲ್ಲಿರುವಾಗ ಸರಿಯಾಗಿ ಊಟ, ತಿಂಡಿ ಇಲ್ಲದೇ ಬಿಪಿ ಹೆಚ್ಚು ಕಡಿಮೆ ಆಗಿ ಏನಾದ್ರೂ ಆದರೆ ಯಾರು ಹೊಣೆ? ಹಾಗಾಗಿ ಬಿಗ್ ಬಾಸ್ ಒಂದು ದಂಧೆ ಹೊರತು ಮತ್ತೇನೂ ಅಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ. ಕೆಲವು ದಿನಗಳ ಮೊದಲು ಬಿಗ್ ಬಾಸ್ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಕ್ಕೆ ಆರ್ಯವರ್ಧನ್ ಗುರೂಜಿ ವಿರುದ್ಧ ಕಿಚ್ಚ ಸುದೀಪ್ ಅಭಿಮಾನಿಗಳು ಪ್ರತಿಭಟನೆ ನಡೆಸಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ರಾಕಿಂಗ್ ಸ್ಟಾರ್ ಯಶ್ ಗೆ ಕರೀನಾ ನಾಯಕಿ ಆದರೆ ಹೇಗಿರುತ್ತೆ?