Select Your Language

Notifications

webdunia
webdunia
webdunia
webdunia

BBK10: ಮಾಡಿದ ಪ್ರತಿಜ್ಞೆ ಮರೆತು ಕೂಗಾಡಿದ ವಿನಯ್

ಬಿಬಿಕೆ10
ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ಇನ್ನು ಅಗ್ರೆಸಿವ್ ಆಗಿ ಇರಲ್ಲ ಎಂದು ತನಗೆ ತಾನೇ ಹೇಳಿಕೊಂಡಿದ್ದ ವಿನಯ್ ಈಗ ತಮ್ಮದೇ ಮಾತು ಮುರಿದಿದ್ದಾರೆ.

ಕಳೆದ ವಾರಂತ್ಯದಲ್ಲಿ ಮನೆಗೆ ಶೈನ್ ಶೆಟ್ಟಿ ಬಂದಿದ್ದಾಗ ನಿಮ್ಮ ಅಗ್ರೆಸಿವ್ ಸ್ವಭಾವ ನಿಮಗೇ ಮುಳುವಾಗಬಹುದು ಎಂದು ಎಚ್ಚರಿಕೆ ಕೊಟ್ಟಿದ್ದರು. ಅದಾದ ಬಳಿಕ ಎಚ್ಚೆತ್ತುಕೊಂಡ ವಿನಯ್ ಇತರ ಸ್ಪರ್ಧಿಗಳ ಮೇಲೆ ಕೂಗಾಡುವುದನ್ನು ಬಿಟ್ಟು ತಾಳ್ಮೆಯಿಂದಿದ್ದರು.

ಆದರೆ ಈ ತಾಳ್ಮೆ ಕೇವಲ ಒಂದೇ ವಾರಕ್ಕೆ ಕೊನೆಯಾಗಿದೆ. ಈ ವಾರ ಬಿಗ್ ಬಾಸ್ ಎಲ್ಲಾ ಸ್ಪರ್ಧಿಗಳಿಗೂ ತಮ್ಮ ಬೆಲೆ ನಿರ್ಧರಿಸಲು ಅವಕಾಶವೊಂದನ್ನು ಕೊಟ್ಟಿದೆ. ಈ ವೇಳೆ ವಿನಯ್, ಸಂಗೀತಾ, ತನಿಷಾ, ಕಾರ್ತಿಕ್ ನಡುವೆ ಕಿತ್ತಾಟ ನಡೆದಿದೆ.

ಯೋಗ್ಯತೆಯ ವಿಚಾರವನ್ನು ತನಿಷಾ ಎತ್ತಿದಾಗ ತಾಳ್ಮೆ ಕಳೆದುಕೊಂಡ ವಿನಯ್ ‘ಯೋಗ್ಯತೆ ಇದ್ದರೆ ಎದೆಗೆ ಒದ್ದು ನೋಡು’ ಕೂಗಾಡಿದ್ದಾರೆ. ಆ ಮೂಲಕ ಮತ್ತೆ ತಮ್ಮ ಹಳೆಯ ಫಾರ್ಮ್ ಗೆ ಬಂದಿದ್ದಾರೆ. ಈ ಎಪಿಸೋಡ್ ಇಂದು ಪ್ರಸಾರವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಿರುತೆರೆಯಲ್ಲಿ ಹೊಸ ಪ್ರಯೋಗ: ಲಕ್ಷ್ಮೀ ಬಾರಮ್ಮಾ ಧಾರವಾಹಿಯ ಸಾಂಗ್ ರಿಲೀಸ್