Select Your Language

Notifications

webdunia
webdunia
webdunia
webdunia

ಬಿಬಿಕೆ10: ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ಕಾಂತಾರ ಚೆಲುವೆ ಸಪ್ತಮಿ ಗೌಡ

ಬಿಬಿಕೆ10: ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ಕಾಂತಾರ ಚೆಲುವೆ ಸಪ್ತಮಿ ಗೌಡ
ಬೆಂಗಳೂರು , ಶನಿವಾರ, 30 ಡಿಸೆಂಬರ್ 2023 (12:50 IST)
ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ಈ ವಾರ ಪ್ರತಿಯೊಬ್ಬ ಸ್ಪರ್ಧಿಯ ಕುಟುಂಬದವರು ಬಂದು ಒಂದು ರೀತಿಯಲ್ಲಿ ಭಾವನಾತ್ಮಕ ವಾತಾವರಣ ಕಂಡುಬಂದಿತ್ತು.

ಎಲ್ಲಾ ಸ್ಪರ್ಧಿಗಳ ಕುಟುಂಬಸ್ಥರು ಬಂದು ಎಲ್ಲರ ಜೊತೆ ಮಾತನಾಡಿ ಹೋಗಿದ್ದಾರೆ. ಈ ವಾರ ಸ್ಪರ್ಧಿಗಳಿಗೆ ಪ್ಲೇ ಆಂಡ್ ಪಾಸ್ ಗೇಮ್ ಬಿಟ್ಟರೆ ಬೇರೇನೂ ಟಾಸ್ಕ್ ಇರಲಿಲ್ಲ. ಹೀಗಾಗಿ ಸಮಾಧಾನಕರವಾಗಿ ವಾರ ಮುಗಿದಿದೆ.

ಈ ಖುಷಿಯ ಜೊತೆಗೆ ಈ ವಾರ ಕಾಂತಾರ ಸಿನಿಮಾ ಮೂಲಕ ಜನ ಮನ ಗೆದ್ದ ನಟಿ ಸಪ್ತಮಿ ಗೌಡ ಬಿಗ್ ಬಾಸ್ ಮನೆಗೆ ಎಂಟ್ರಿಕೊಟ್ಟಿದ್ದಾರೆ. ಬಿಗ್ ಬಾಸ್ ಮನೆಗೆ ಅತಿಥಿಯಾಗಿ ಎಂಟ್ರಿ ಕೊಟ್ಟ ಸಪ್ತಮಿ ಗೌಡ ಸ್ಪರ್ಧಿಗಳನ್ನು ಮಾತನಾಡಿಸಿ ಅವರ ಜೊತೆ ಹೆಜ್ಜೆ ಹಾಕಿ ಖುಷಿ ಪಡಿಸಿದ್ದಾರೆ.

ಕಾಂತಾರ ಲೀಲಾಳನ್ನು ಕಂಡು ಮನೆಯವರೂ ಖುಷಿಯಾಗಿದ್ದಾರೆ. ಈ ವಾರ ಮನೆಯವರ ಭೇಟಿ ಜೊತೆಗೆ ನೆಚ್ಚಿನ ನಟಿಯನ್ನೂ ಭೇಟಿಯಾದ ಖುಷಿ ಮನೆಯವರದ್ದಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಅನಿಲ್ ಕುಂಬ್ಳೆ ಮನೆಯಲ್ಲಿ ಗೋಲ್ಡನ್ ಸ್ಟಾರ್ ಗಣೇಶ್