Select Your Language

Notifications

webdunia
webdunia
webdunia
webdunia

ಕಿರುತೆರೆಯಲ್ಲಿ ಹೊಸ ಪ್ರಯೋಗ: ಲಕ್ಷ್ಮೀ ಬಾರಮ್ಮಾ ಧಾರವಾಹಿಯ ಸಾಂಗ್ ರಿಲೀಸ್

ಕಿರುತೆರೆಯಲ್ಲಿ ಹೊಸ ಪ್ರಯೋಗ: ಲಕ್ಷ್ಮೀ ಬಾರಮ್ಮಾ ಧಾರವಾಹಿಯ ಸಾಂಗ್ ರಿಲೀಸ್
ಬೆಂಗಳೂರು , ಸೋಮವಾರ, 1 ಜನವರಿ 2024 (09:00 IST)
Photo Courtesy: facebook
ಬೆಂಗಳೂರು: ಇತ್ತೀಚೆಗೆ ಕನ್ನಡ ಕಿರುತೆರೆಯೂ ಹಿರಿತೆರೆಗೆ ಯಾವುದೇ ರೀತಿ ಕಮ್ಮಿಯಿಲ್ಲ ಎಂಬಂತೆ ಎಲ್ಲಾ ವಿಚಾರದಲ್ಲೂ ಪೈಪೋಟಿ ನೀಡುತ್ತಿದೆ.

ಇದೀಗ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ಬಾರಮ್ಮಾ ಧಾರವಾಹಿಯಲ್ಲಿ ಹೊಸದೊಂದು ಪ್ರಯೋಗವಾಗುತ್ತಿದೆ. ಈ ಧಾರವಾಹಿಯಲ್ಲಿ ನಾಯಕ ವೈಷ್ಣವ್ ಗಾಯಕ. ಆತನ ಪತ್ನಿ ಲಕ್ಷ್ಮಿ ಬರೆದ ಹಾಡಿಗೆ ರಾಗ ಸಂಯೋಜಿಸಿ ಇಬ್ಬರೂ ಜೊತೆಯಾಗಿ ಅಭಿನಯಿಸಿ ಆಲ್ಬಂ ಹಾಡೊಂದನ್ನು ಹೊರತರುವ ಸನ್ನಿವೇಶವಿದೆ.

ಇದಕ್ಕಾಗಿ ಧಾರವಾಹಿ ತಂಡ ಹೊಸದೊಂದು ಹಾಡನ್ನು ಸೃಷ್ಟಿಸಿದ್ದು, ಈ ಪ್ರೇಮಕಾವ್ಯ ಇಂದು ಲಾಂಚ್ ಆಗಲಿದೆ. ಈ ಧಾರವಾಹಿಯಲ್ಲಿ ನಾಯಕನ ಪಾತ್ರ ಮಾಡುತ್ತಿರುವುದು ಬ್ರೋ ಗೌಡ ಅಲಿಯಾಸ್ ಶಮಂತ್. ಅವರೇ ಈ ಹಾಡಿಗೆ ಧ್ವನಿ ನೀಡಿದ್ದಾರೆ.

ಈಗಾಗಲೇ ಕಿರುತೆರೆಯ ಅನೇಕ ಧಾರವಾಹಿಗಳ ಟೈಟಲ್ ಹಾಡುಗಳು ಜನಪ್ರಿಯವಾಗಿದೆ. ಪುಟ್ಟಕ್ಕನ ಮಕ್ಕಳು, ಅಮೃತಧಾರೆ ಮೊದಲಾದ ಜೀ ಕನ್ನಡ ವಾಹಿನಿಯ ಧಾರವಾಹಿಗಳಲ್ಲಿ ಈಗಾಗಲೇ ಧಾರವಾಹಿಗಾಗಿಯೇ ಎರಡು ಹಾಡುಗಳನ್ನು ನಿರ್ಮಿಸಲಾಗಿತ್ತು. ಕಲರ್ಸ್ ವಾಹಿನಿಯೂ ಲಕ್ಷ್ಮೀ ಬಾರಮ್ಮ ಧಾರವಾಹಿಯಲ್ಲಿ ಮಾಡಿದ್ದ ಸಖಿಯೇ ಸಖಿಯೇ ಹಾಡು ಸೂಪರ್ ಹಿಟ್ ಆಗಿತ್ತು. ಇದೀಗ ಬರುತ್ತಿರುವ ಈ ಹಾಡಿನ ವಿಶೇಷತೆ ತಿಳಿಯಲು ಇಂದು ಧಾರವಾಹಿ ಎಪಿಸೋಡ್ ನೋಡಬೇಕಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಿರಿಕ್ ಪಾರ್ಟಿ ಹೆಸರೆತ್ತದೇ ಇಂಡಸ್ಟ್ರಿಗೆ ಬಂದು 7 ನೇ ವರ್ಷದ ಬಗ್ಗೆ ಬರೆದುಕೊಂಡ ರಶ್ಮಿಕಾ ಮಂದಣ್ಣ