ಬೆಂಗಳೂರು: ಲೂಸಿಯಾ ಎನ್ನುವ ಲೋ ಬಜೆಟ್ ಸಿನಿಮಾವನ್ನು ಅದ್ಭುತವಾಗಿ ತೆಗೆದು ನಿರ್ದೇಶಕನಾಗಿ ಗಮನ ಸೆಳೆದಿದ್ದ ಪವನ್ ಕುಮಾರ್ ಯಾಕೋ ಆ ಲಹರಿ ಕಳೆದುಕೊಂಡರಾ? ಧೂಮಂ ಸಿನಿಮಾ ನೋಡಿದ ಪ್ರೇಕ್ಷಕರು ಏನು ಹೇಳಿದರು?
ಮಲಯಾಳಂ ನಟ ಫಹಾದ್ ಫಾಸಿಲ್ ನಾಯಕರಾಗಿರುವ ಧೂಮಂ ಸಿನಿಮಾ ಇಂದು ಮಲಯಾಳಂ ಮತ್ತು ಕನ್ನಡದಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಿದೆ. ಆದರೆ ಸಿನಿಮಾ ನೋಡಿದ ಜನ ಕತೆಯ ಬಗ್ಗೆ ಚಕಾರವೆತ್ತಿಲ್ಲ. ಆದರೆ ನಿರ್ದೇಶನ ಮತ್ತು ನಿರ್ದೇಶಕ ಸಸ್ಪೆನ್ಸ್ ಕಾಯ್ದುಕೊಳ್ಳುವಲ್ಲಿ ವಿಫಲರಾದರು ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಹಿನ್ನಲೆ ಸಂಗೀತವೂ ಇನ್ನಷ್ಟು ಚೆನ್ನಾಗಿ ಬರಬಹುದಿತ್ತು ಎನ್ನುತ್ತಿದ್ದಾರೆ. ಅದ್ಧೂರಿ ಸಿನಿಮಾಗಳನ್ನು ನಿರ್ಮಿಸುವ ಹೊಂಬಾಳೆ ಫಿಲಂಸ್ ಯಾಕೋ ಈ ಸಿನಿಮಾವನ್ನು ಅಷ್ಟೇ ಚೆನ್ನಾಗಿ ಹೊರತರಲು ಎಡವಿದೆ ಎನ್ನುವುದು ಕೆಲವರ ಸಿನಿಮಾ. ಹಾಗಿದ್ದರೂ ಒಂದು ಬಾರಿ ನೋಡುವಂತಹ ಸಿನಿಮಾ. ಕತೆ ಮಾತ್ರ ಸಖತ್ ಆಗಿದೆ. ಆದರೆ ಅದನ್ನು ಕಟ್ಟಿಕೊಡುವಲ್ಲಿ ಪವನ್ ಕೊಂಚ ಎಡವಿದರು. ಫಹಾದ್ ಎಂದಿನಂತೆ ಸಿಕ್ಕ ಪಾತ್ರವನ್ನು ಅದ್ಭುತವಾಗಿ ಅಭಿನಯಿಸಿದ್ದಾರೆ ಎನ್ನುವುದು ವೀಕ್ಷಕರ ಅಭಿಪ್ರಾಯ.