ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮಾಡಬೇಕಿದ್ದ ದ್ವಿತ ಸಿನಿಮಾವನ್ನು ಮಾಡಲು ಹೊಂಬಾಳೆ ಫಿಲಂಸ್ ನಿರ್ಧರಿಸಿದೆ.
ಪವನ್ ಕುಮಾರ್ ನಿರ್ದೇಶನದಲ್ಲಿ ಧೂಮಂ ಎನ್ನುವ ಟೈಟಲ್ ನೊಂದಿಗೆ ಸಿನಿಮಾ ನಿರ್ಮಾಣವಾಗಲಿದೆ. ಈ ಸಿನಿಮಾಗೆ ನಾಯಕ-ನಾಯಕಿಯಾಗಿ ಮಲಯಾಳಂ ಪ್ರತಿಭಾವಂತ ನಟ ಫಹಾದ್ ಫಾಸಿಲ್ ಮತ್ತು ಅಪರ್ಣಾ ಬಾಲಮುರಳಿ ಅವರನ್ನು ಆಯ್ಕೆ ಮಾಡಲಾಗಿದೆ.
ಇದಕ್ಕೆ ಕನ್ನಡ ಫ್ಯಾನ್ಸ್ ವಿರೋಧ ವ್ಯಕ್ತಪಡಿಸಿದ್ದಾರೆ. ಅಪ್ಪು ಮಾಡಬೇಕಿದ್ದ ಪಾತ್ರ ಮಾಡಲು ಕನ್ನಡದವರು ಯಾರೂ ಸಿಗಲಿಲ್ಲವೇ? ಯಾಕೆ ಪರಭಾಷಿಕರಿಗೇ ಮಣೆ ಹಾಕುತ್ತೀರಿ ಎಂದು ಹೊಂಬಾಳೆ ಫಿಲಂಸ್ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಕಿಡಿ ಕಾರಿದ್ದಾರೆ.
-Edited by Rajesh Patil