Publish Date: Sat, 01 Oct 2022 (17:02 IST)
Updated Date: Sat, 01 Oct 2022 (17:04 IST)
ಬೆಂಗಳೂರು: ಎದುರು ಮನೆಯವರಿಗೆ ಬೆದರಿಕೆ ಮತ್ತು ಕಿರುಕುಳ ಕೊಟ್ಟ ಆರೋಪ ಎದುರಿಸುತ್ತಿರುವ ನಿರ್ಮಾಪಕ ಸೌಂದರ್ಯ ಜಗದೀಶ್ ಪುತ್ರ ಸ್ನೇಹಿತ್ ಪರ ನಿಂತಿದ್ದಕ್ಕೆ ರಿಯಲ್ ಸ್ಟಾರ್ ಉಪೇಂದ್ರ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗಿದ್ದಾರೆ.
ಎದುರು ಮನೆಯ ಮಹಿಳೆ ಮತ್ತು ಆಕೆಯ ಪತಿಯ ಜೊತೆ ಜಗಳವಾಡಿದ್ದಾರೆಂದು ಸ್ನೇಹಿತ್ ವಿರುದ್ಧ ದೂರು ದಾಖಲಾಗಿದೆ. ಇದರ ಬೆನ್ನಲ್ಲೇ ಉಪೇಂದ್ರ ಸೋಷಿಯಲ್ ಮೀಡಿಯಾದಲ್ಲಿ ಸ್ನೇಹಿತ್ ನನ್ನು ಚಿಕ್ಕವನಿಂದ ನೋಡಿದ್ದೇನೆ. ಆತ ಒಳ್ಳೆಯ ಹುಡುಗ. ಹಾಗೇನಾದರೂ ತಪ್ಪಾಗಿದ್ದರೆ ಇಬ್ಬರೂ ಕೂತು ಮಾತುಕತೆ ಮಾಡಿ ಪರಿಹರಿಸಿಕೊಳ್ಳಲಿ. ಒಂದಂತೂ ಎಲ್ಲರಿಗೂ ಅನ್ವಯಿಸುತ್ತದೆ. ಅಜ್ಞಾನದ ಫಲ ಅಹಂಕಾರ, ಅಹಂಕಾರದ ಫಲ ಧ್ವೇಷ, ಧ್ವೇಷದ ಫಲ ಸರ್ವನಾಶ ಎಂದು ಉಪೇಂದ್ರ ಸಂದೇಶ ಬರೆದಿದ್ದರು.
ಉಪೇಂದ್ರ ಇಂತಹದ್ದೊಂದು ಸಂದೇಶ ಪ್ರಕಟಿಸುತ್ತಿದ್ದಂತೇ ಸೋಷಿಯಲ್ ಮೀಡಿಯಾದಲ್ಲಿ ನೂರಾರು ಮಂದಿ ಕಾಮೆಂಟ್ ಮಾಡಿ ಅವರನ್ನು ಟ್ರೋಲ್ ಮಾಡಿದ್ದಾರೆ. ಆರೋಪಿಗಳ ಪರವಾಗಿ ನಿಂತಿದ್ದಕ್ಕೆ ಕೆಲವರು ಅವಾಚ್ಯವಾಗಿ ನಿಂದಿಸಿದ್ದಾರೆ. ಇದಕ್ಕೆ ಕೂಡಾ ಉಪೇಂದ್ರ ಪ್ರತಿಕ್ರಿಯಿಸಿದ್ದು, ನೋಡಿ ಇದನ್ನೆಲ್ಲಾ ನೀವು ಪ್ರಶ್ನಿಸುತ್ತೀರಿ. ಆದರೆ ನಮ್ಮ ಸುತ್ತಮುತ್ತ ಅವ್ಯವಸ್ಥೆ ಬಗ್ಗೆ ಪ್ರಶ್ನಿಸಲು ನಿಮಗೆ ಧೈರ್ಯವಿಲ್ಲ ಎಂದು ತಿರುಗೇಟು ನೀಡಿದ್ದಾರೆ.
-Edited by Rajesh Patil