Publish Date: Fri, 30 Sep 2022 (09:10 IST)
Updated Date: Fri, 30 Sep 2022 (09:19 IST)
ಬೆಂಗಳೂರು: ಹೊಂಬಾಳೆ ಫಿಲಂಸ್ ನಿರ್ಮಾಣದ ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಕಾಂತಾರ ಸಿನಿಮಾ ಇಂದಿನಿಂದ ವಿಶ್ವದಾದ್ಯಂತ ಬಿಡುಗಡೆಯಾಗಿದ್ದು ಸಿನಿಮಾ ವೀಕ್ಷಿಸಿದ ಸೆಲೆಬ್ರಿಟಿಗಳೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕಾಂತಾರ ಸಿನಿಮಾದಲ್ಲಿ ಕರಾವಳಿಯ ಭೂತಕೋಲ, ಕಂಬಳವನ್ನು ಚೆನ್ನಾಗಿ ಚಿತ್ರೀಕರಿಸಲಾಗಿದೆ. ವಿಶೇಷ ಪ್ರದರ್ಶನದಲ್ಲಿ ಚಿತ್ರತಂಡದೊಂದಿಗೆ ಕೂತು ಸಿನಿಮಾ ವೀಕ್ಷಿಸಿದ ನಟಿ ರಮ್ಯಾ ಸಿನಿಮಾ ಬಗ್ಗೆ ತಮ್ಮ ವಿಮರ್ಶೆ ಬರೆದಿದ್ದಾರೆ. ಭೂತಕೋಲದ ಬಗ್ಗೆ ಈ ಸಿನಿಮಾದಿಂದ ಇನ್ನಷ್ಟು ತಿಳಿದುಕೊಂಡೆ. ಆ ವೇಷದಲ್ಲಿ ರಿಷಬ್ ನಟನೆ ನೋಡಿ ನಿಜಕ್ಕೂ ರೋಮಾಂಚನವಾಗುತ್ತದೆ. ಎಲ್ಲರೂ ನೋಡಲೇ ಬೇಕಾದ ಕನ್ನಡದ ಹೆಮ್ಮೆಯ ಸಿನಿಮಾವಿದು ಎಂದು ರಮ್ಯಾ ಹೊಗಳಿದ್ದಾರೆ.
ಇನ್ನು, ಸಿನಿಮಾ ವೀಕ್ಷಿಸಿದ ನಟಿ ಅಮೂಲ್ಯ, ರಕ್ಷಿತ್ ಶೆಟ್ಟಿ, ಅನೂಪ್ ಭಂಡಾರಿ ಸೇರಿದಂತೆ ಅನೇಕರು ಸಿನಿಮಾ ನೋಡಿ ಇದೊಂದು ಅದ್ಭುತ ಎಂದು ಕೊಂಡಾಡಿದ್ದಾರೆ.