Publish Date: Fri, 30 Sep 2022 (08:00 IST)
Updated Date: Fri, 30 Sep 2022 (08:35 IST)
ಬೆಂಗಳೂರು: ಕನ್ನಡ ಸಿನಿ ಪ್ರೇಕ್ಷಕರಿಗೆ ಈ ದಸರಾ ನಿಜಕ್ಕೂ ಹಬ್ಬವಾಗಲಿದೆ. ಎರಡು ಬಹುನಿರೀಕ್ಷಿತ ಸಿನಿಮಾಗಳು ಇಂದು ರಿಲೀಸ್ ಆಗುತ್ತಿವೆ.
ನವರಸನಾಯಕ ಜಗ್ಗೇಶ್-ವಿಜಯ್ ಪ್ರಸಾದ್ ಕಾಂಬಿನೇಷನ್ ನಲ್ಲಿ ಈಗಾಗಲೇ ನೀರ್ ದೋಸೆ ಎಂಬ ಹಿಟ್ ಚಿತ್ರಕೊಟ್ಟಿತ್ತು. ಇದೀಗ ತೋತಾಪುರಿ ಮೂಲಕ ಈ ಜೋಡಿ ಪ್ರೇಕ್ಷಕರಿಗೆ ಕಚಗುಳಿಯಿಡಲು ಬರುತ್ತಿದೆ. ಇದು ಪಕ್ಕಾ ವಿಜಯ್ ಪ್ರಸಾದ್ ಶೈಲಿಯ ಸಿನಿಮಾ ಎನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಜೊತೆಗೆ ಜಗ್ಗೇಶ್ ಕಾಮಿಡಿ, ಮ್ಯಾನರಿಸಂ, ಅದಿತಿ ಪ್ರಭುದೇವ ನಿಮಗೆ ಇಷ್ಟವಾಗಲಿದ್ದಾರೆ.
ಸ್ಯಾಂಡಲ್ ವುಡ್ ಕ್ರಿಯೇಟಿವ್ ನಿರ್ದೇಶಕ ಎಂಬುದನ್ನು ರಿಷಬ್ ಶಟ್ಟಿ ಈಗಾಗಲೇ ಪ್ರೂವ್ ಮಾಡಿದ್ದಾರೆ. ರಿಷಬ್ ಸಿನಿಮಾಗಳೆಂದರೆ ಮನರಂಜನೆ ಜೊತೆಗೆ ಉತ್ತಮ ಕತೆ ಇರುತ್ತದೆ ಎನ್ನುವುದು ಪ್ರೇಕ್ಷಕರಿಗೆ ಗೊತ್ತೇ ಇರುತ್ತದೆ. ಇದೀಗ ರಿಷಬ್ ತಮ್ಮದೇ ಶೈಲಿಯಲ್ಲಿ ಸಿನಿಮಾವನ್ನು ನಿರ್ದೇಶಿಸಿ, ನಟಿಸಿರುವ ಸಿನಿಮಾ ಕಾಂತಾರ ಇಂದಿನಿಂದ ಪ್ರೇಕ್ಷಕರ ಮುಂದೆ ಬರುತ್ತಿದೆ. ಈ ಎರಡೂ ಸಿನಿಮಾಗಳೂ ಪ್ರೇಕ್ಷಕರಿಗೆ ರಸದೌತಣ ನೀಡುವುದು ಗ್ಯಾರಂಟಿ.
-Edited by Rajesh Patil