Webdunia - Bharat's app for daily news and videos

Install App

Select Your Language

Notifications

webdunia
webdunia
webdunia
webdunia

ಹಳೇ ಬಾಯ್ ಫ್ರೆಂಡ್ಸ್ ಗಳ ಜೊತೆ ಈಗಲೂ ಒಳ್ಳೆ ಸಂಬಂಧವಿದೆ ಎಂದ ರಶ್ಮಿಕಾ ಮಂದಣ್ಣ

webdunia
ಶನಿವಾರ, 1 ಅಕ್ಟೋಬರ್ 2022 (09:50 IST)
WD
ಮುಂಬೈ: ಗುಡ್ ಬೈ ಸಿನಿಮಾ ಪ್ರಚಾರದ ವೇಳೆ ಸಂದರ್ಶನವೊಂದರಲ್ಲಿ ಡೇಟಿಂಗ್, ಬಾಯ್ ಫ್ರೆಂಡ್ ಗಳ ಬಗ್ಗೆ ರಶ್ಮಿಕಾ ಮನಬಿಚ್ಚಿ ಮಾತನಾಡಿದ್ದಾರೆ.

ನಾನು ಮತ್ತು  ವಿಜಯ್ ಸಿನಿಮಾ, ಜಾಹೀರಾತುಗಳಲ್ಲಿ ಒಟ್ಟಾಗಿ ಕೆಲಸ ಮಾಡಿದೆವು. ನಾವಿಬ್ಬರೂ ಒಂದೇ ಸಮಯಕ್ಕೆ ಉದ್ಯಮಕ್ಕೆ ಕಾಲಿಟ್ಟಿದ್ದೆವು. ಹಾಗಾಗಿ ನಮ್ಮಿಬ್ಬರ ನಡುವೆ ಒಳ್ಳೆಯ ಗೆಳೆತನ ಮೂಡಿತು. ನಮಗಿಬ್ಬರಿಗೂ ಹೈದರಾಬಾದ್ ನಲ್ಲಿ ಗೆಳೆಯ ಗ್ಯಾಂಗ್ ಇದೆ. ಹೀಗಾಗಿ ಒಟ್ಟಾಗಿ ಚಿಲ್ ಮಾಡುತ್ತೇವೆ. ಇದನ್ನು ನೋಡಿ ಎಲ್ಲರೂ ಲವ್ ಎಂದುಕೊಂಡರು. ನಾನು ಇದನ್ನೆಲ್ಲಾ ಕ್ಯೂಟ್ ಎಂದುಕೊಂಡೆ.

ನನ್ನ ಹಳೆಯ ಬಾಯ್ ಫ್ರೆಂಡ್ ಗಳು, ಅವರ ಹಾಲಿ ಲವ್ವರ್ಸ್, ಮನೆಯವರ ಜೊತೆ ಈಗಲೂ ಉತ್ತಮ ಸಂಬಂಧವಿಟ್ಟುಕೊಂಡಿದ್ದೇನೆ. ಯಾರ ಜೊತೆಗೂ ನನಗೆ ಕಠಿಣ ಭಾವನೆಯಿಲ್ಲ ಎಂದಿದ್ದಾರೆ ರಶ್ಮಿಕಾ.
-Edited by Rajesh Patil

ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!
Share this Story:

Follow Webdunia kannada

ಮುಂದಿನ ಸುದ್ದಿ

ಆ ಕ್ಷಣವನ್ನು ಜೀವನದಲ್ಲಿ ಮರೆಯಕ್ಕಾಗಲ್ಲ: ತಮಿಳು ನಟ ಸೂರ್ಯ