Publish Date: Tue, 18 Apr 2023 (09:00 IST)
Updated Date: Tue, 18 Apr 2023 (09:19 IST)
ಬೆಂಗಳೂರು: ಕನ್ನಡದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಂಸ್ ಪರಭಾಷಾ ಸಿನಿಮಾಗಳಿಗೂ ಹೂಡಿಕೆ ಮಾಡುತ್ತಿದೆ.
ಮಲಯಾಳಂ ನಟ ಫಹಾದ್ ಫಾಸಿಲ್ ನಾಯಕರಾಗಿರುವ ಧೂಮಂ ಎನ್ನುವ ಪ್ಯಾನ್ ಇಂಡಿಯಾ ಸಿನಿಮಾವೊಂದನ್ನು ಹೊಂಬಾಳೆ ಫಿಲಂಸ್ ನಿರ್ಮಿಸುತ್ತಿದೆ. ಈ ಸಿನಿಮಾದ ನಿರ್ದೇಶಕ ಕನ್ನಡದವರೇ ಆದ ಪವನ್ ಕುಮಾರ್.
ಇದರ ಪೋಸ್ಟರ್ ಈಗ ಬಿಡುಗಡೆಯಾಗಿದೆ. ಆದರೆ ಕೇವಲ ಮಲಯಾಳಂ ಭಾಷೆಯಲ್ಲಿ ಮಾತ್ರ ಪೋಸ್ಟರ್ ಬಿಡುಗಡೆಯಾಗಿದೆ. ಇದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ನಿರ್ಮಾಣ ಸಂಸ್ಥೆ ಕನ್ನಡದ್ದು, ನಿರ್ದೇಶಕರು ಕನ್ನಡಿಗರು ಆದರೆ ಪೋಸ್ಟರ್ ಯಾಕೆ ಪರಭಾಷೆಯಲ್ಲಿ ಎಂದು ಆಕ್ರೋಶ ಹೊರಹಾಕಿದ್ದಾರೆ. ಇನ್ನು ಕೆಲವರು ಕನ್ನಡ ಪೋಸ್ಟರ್ ಎಲ್ರೋ ಎಂದು ಅವಾಚ್ಯವಾಗಿ ಹೊಂಬಾಳೆ ಫಿಲಂಸ್ ಗೆ ನಿಂದಿಸಿದ್ದಾರೆ.