ಬೆಂಗಳೂರು: ಕನ್ನಡದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಂಸ್ ಮುಂದಿನ 5 ವರ್ಷಗಳಲ್ಲಿ 3000 ಕೋಟಿ ರೂ. ಹೂಡಿಕೆ ಮಾಡುವ ಗುರಿ ಹಾಕಿಕೊಂಡಿದೆ.
									
			
			 
 			
 
 			
			                     
							
							
			        							
								
																	ಕೆಜಿಎಫ್, ಸಲಾರ್, ಕಾಂತಾರದಂತಹ ಬಿಗ್ ಸಿನಿಮಾಗಳ ನಿರ್ಮಾಪಕರಾಗಿರುವ ಹೊಂಬಾಳೆ ಫಿಲಂಸ್ ನ ವಿಜಯ್ ಕಿರಗಂದೂರು ಹೊಸ ವರ್ಷದಂದು ಅಭಿಮಾನಿಗಳಿಗೆ ತಮ್ಮ ಮುಂದಿನ ಐದು ವರ್ಷಗಳ ಗುರಿ ಬಗ್ಗೆ ಹೇಳಿಕೊಂಡಿದ್ದಾರೆ.
									
										
								
																	ಈಗಾಗಲೇ ಕೆಜಿಎಫ್ 1000 ಕೋಟಿಗೂ ಅಧಿಕ ಗಳಿಕೆ ಮಾಡಿತ್ತು. ಕಾಂತಾರ 400 ಕೋಟಿಗೂ ಅಧಿಕ ಗಳಿಕೆ ಮಾಡಿತ್ತು. ಹೀಗಾಗಿ ಈ ಎಲ್ಲಾ ಸಿನಿಮಾಗಳಿಂದ ಬಂದ ಲಾಭವನ್ನು ಹೊಸ ಸಿನಿಮಾಗಳಿಗೆ ಹೂಡಿಕೆ ಮಾಡಲಿದೆ. ಪರಭಾಷೆಗಳಲ್ಲೂ ಚಿತ್ರ ನಿರ್ಮಾಣ ಮಾಡುತ್ತಿರುವ ಹೊಂಬಾಳೆ ಫಿಲಂಸ್ ಇನ್ನಷ್ಟು ಬಿಗ್ ಬಜೆಟ್ ಸಿನಿಮಾಗಳನ್ನು ಘೋಷಣೆ ಮಾಡಲಿದೆ.