Publish Date: Fri, 23 Dec 2022 (08:50 IST)
Updated Date: Fri, 23 Dec 2022 (08:57 IST)
ಬೆಂಗಳೂರು: ಶಿವರಾಜ್ ಕುಮಾರ್ ನಾಯಕರಾಗಿರುವ ವೇದ ಸಿನಿಮಾ ಇಂದು ಅದ್ಧೂರಿಯಾಗಿ ಥಿಯೇಟರ್ ನಲ್ಲಿ ತೆರೆ ಕಂಡಿದೆ.
ಬೆಳಗಿನ ಜಾವದ ಶೋಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಮೊದಲಾರ್ಧದಲ್ಲಿ ಶಿವಣ್ಣನ ಎಂಟ್ರಿ, ಆಕ್ಷನ್, ಡ್ಯಾನ್ಸ್ ಗೆ ಪ್ರೇಕ್ಷಕ ಫಿದಾ ಆಗಿದ್ದಾನೆ. ಶಿವಣ‍್ಣ ಎಂಟ್ರಿಗೆ ಪ್ರೇಕ್ಷಕರು ಹುಚ್ಚೆದ್ದು ಕುಣಿದಿದ್ದಾರೆ.
ವಿಶೇಷವೆಂದರೆ ಥಿಯೇಟರ್ ನಲ್ಲಿ ಸಿನಿಮಾ ಅರಂಭದ ವೇಳೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಗೆ ವಿಶೇಷ ವಿಡಿಯೋ ಮೂಲಕ ಗೌರವ ಸಲ್ಲಿಸಲಾಗಿದೆ. ಈ ವೇಳೆ ಪ್ರೇಕ್ಷಕರು ಹೂ ಮಳೆ ಸುರಿಸಿ ಅಪ್ಪುಗೆ ಗೌರವ ಸಲ್ಲಿಸಿದ್ದಾರೆ.