Select Your Language

Notifications

webdunia
webdunia
webdunia
webdunia

ಉಕ್ರೇನ್ ಯುದ್ಧದ ಬಗ್ಗೆ ಭಾರತದ ನಿಲುವಿಗೆ ಯುಎಸ್ ಸಾಥ್

ಉಕ್ರೇನ್ ಯುದ್ಧದ ಬಗ್ಗೆ ಭಾರತದ ನಿಲುವಿಗೆ ಯುಎಸ್ ಸಾಥ್
ವಾಷಿಂಗ್ಟನ್ , ಬುಧವಾರ, 21 ಡಿಸೆಂಬರ್ 2022 (11:41 IST)
ವಾಷಿಂಗ್ಟನ್ : ರಷ್ಯಾ- ಉಕ್ರೇನ್ ಯುದ್ಧದ ಬಗ್ಗೆ ಎಲ್ಲಾ ರೀತಿಯ ಹಿಂಸಾಚಾರಗಳನ್ನು ನಿಲ್ಲಿಸಲು ಮತ್ತು ರಾಜತಾಂತ್ರಿಕ ಮಾರ್ಗವನ್ನು ಅನುಸರಿಸಲು ಕರೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅವರ ನಿಲುವನ್ನು ಅಮೆರಿಕ ಮತ್ತೊಮ್ಮೆ ಸ್ವಾಗತಿಸಿದೆ.

ಪ್ರಧಾನಿ ಮೋದಿ ಅವರು ರಷ್ಯಾವು ಉಕ್ರೇನ್ ಮೇಲೆ ನಡೆಸುತ್ತಿರುವ ಯುದ್ಧವನ್ನು ಕೊನೆಗೊಳಿಸುವಂತೆ ಕರೆ ನೀಡಿದ್ದರು. ಈ ಬಗ್ಗೆ ಮಾತನಾಡಿರುವ ಅಮೆರಿಕದ ವಿದೇಶಾಂಗ ಇಲಾಖೆಯ ಪ್ರಧಾನ ಉಪ ವಕ್ತಾರ ವೇದಾಂತ್ ಪಟೇಲ್, ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಯನ್ನು ಸ್ವಾಗತಿಸುತ್ತೇವೆ.

ಇತರ ದೇಶಗಳು ರಷ್ಯಾದ ಬಗ್ಗೆ ತಮ್ಮದೇ ಆದ ನಿರ್ಧಾರವನ್ನು ತೆಗೆದುಕೊಳ್ಳುತ್ತಿವೆ. ಯುದ್ಧದ ಪರಿಣಾಮಗಳನ್ನು ತಗ್ಗಿಸಲು ಮಿತ್ರರಾಷ್ಟ್ರಗಳೊಂದಿಗೆ ಸಮನ್ವಯವನ್ನು ಮುಂದುವರಿಸುತ್ತೇವೆ ಎಂದು ಹೇಳಿದರು.

ರಷ್ಯಾ-ಉಕ್ರೇನ್ ಯುದ್ಧವನ್ನು ನಿಲ್ಲಿಸುವಲ್ಲಿ ಭಾರತದ ಪಾತ್ರದ ಬಗ್ಗೆ ಪ್ರತಿಕ್ರಿಯಿಸಿ, ಶಾಂತಿಯಲ್ಲಿ ತೊಡಗಿಸಿಕೊಳ್ಳಲು ಆಸಕ್ತಿ ಹೊಂದಿರುವ ಮತ್ತು ಈ ಯುದ್ಧವನ್ನು ಕೊನೆಗೊಳಿಸಲು ಆಸಕ್ತಿ ಹೊಂದಿರುವ ಯಾವುದೇ ದೇಶವಾದರೂ ಉಕ್ರೇನ್ನೊಂದಿಗೆ ನಿಕಟ ಸಂಪರ್ಕದಲ್ಲಿರಬೇಕು ಎಂದರು.

Share this Story:

Follow Webdunia kannada

ಮುಂದಿನ ಸುದ್ದಿ

ಜವಾಬ್ದಾರಿ ತೆಗೆದುಕೊಳ್ಳೋರು ತಕ್ಷಣ ಹುದ್ದೆಯಿಂದ ಕೆಳಗಿಯುತ್ತೇನೆ : ಮಸ್ಕ್