Publish Date: Wed, 21 Dec 2022 (11:07 IST)
Updated Date: Wed, 21 Dec 2022 (09:54 IST)
ವಾಷಿಂಗ್ಟನ್ : ಟ್ವಿಟ್ಟರ್ ಸಿಇಒ ಎಲೋನ್ ಮಸ್ಕ್ ಇತ್ತೀಚೆಗೆ ತಾವು ತಮ್ಮ ಹುದ್ದೆಯನ್ನು ತೊರೆಯಬೇಕೇ ಅಥವಾ ಹೀಗೇ ಮುಂದುವರಿಯಬೇಕೇ ಎಂಬ ಬಗ್ಗೆ ಸಮೀಕ್ಷೆಯೊಂದರ ಮೂಲಕ ಬಳಕೆದಾರರ ಅಭಿಪ್ರಾಯವನ್ನು ಪಡೆದುಕೊಂಡಿದ್ದರು.
ಸಮೀಕ್ಷೆಯಲ್ಲಿ ಮಸ್ಕ್ಗೆ ಟ್ವಿಟ್ಟರ್ ಸಿಇಒ ಸ್ಥಾನದಿಂದ ಕೆಳಗಿಳಿಯಲು ಹೆಚ್ಚಿನ ಬಳಕೆದಾರರು ಸೂಚಿಸಿದ್ದು, ಇದೀಗ ಮಸ್ಕ್ ತಾವು ಟ್ವಿಟ್ಟರ್ ಮುಖ್ಯಸ್ಥ ಸ್ಥಾನದಿಂದ ಕೆಳಗಿಳಿಯುವುದಾಗಿ ತಿಳಿಸಿದ್ದಾರೆ.
ಎಲೋನ್ ಮಸ್ಕ್ ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. ಆದರೆ ತಾವು ಕೆಳಗಿಳಿಯಲು ಒಂದು ಷರತ್ತನ್ನೂ ನೀಡಿದ್ದಾರೆ. ನನ್ನ ಜವಾಬ್ದಾರಿ ತೆಗೆದುಕೊಳ್ಳಲು ಯಾರಾದರೂ ಮೂರ್ಖ ಸಿಕ್ಕ ತಕ್ಷಣವೇ ಟ್ವಿಟ್ಟರ್ ಸಿಇಒ ಹುದ್ದೆಗೆ ರಾಜೀನಾಮೆ ನೀಡುತ್ತೇನೆ. ಬಳಿಕ ಕಂಪನಿಯ ಸಾಫ್ಟ್ವೇರ್ ಹಾಗೂ ಸರ್ವರ್ ತಂಡಗಳನ್ನು ಮುನ್ನಡೆಸುತ್ತೇನೆ ಎಂದು ತಿಳಿಸಿದ್ದಾರೆ.