Select Your Language

Notifications

webdunia
webdunia
webdunia
webdunia

ಸಮೀಕ್ಷೆಯ ಫಲಿತಾಂಶಕ್ಕೆ ಬದ್ಧನಾಗಿರುತ್ತೇನೆ ಎಂದ ಮಸ್ಕ್

ಸಮೀಕ್ಷೆಯ ಫಲಿತಾಂಶಕ್ಕೆ ಬದ್ಧನಾಗಿರುತ್ತೇನೆ ಎಂದ ಮಸ್ಕ್
ವಾಷಿಂಗ್ಟನ್ , ಸೋಮವಾರ, 19 ಡಿಸೆಂಬರ್ 2022 (12:29 IST)
ವಾಷಿಂಗ್ಟನ್ : ಈಗಾಗಲೇ ಹಲವು ಸಮೀಕ್ಷೆಗಳನ್ನು ನಡೆಸಿ, ಅದರ ಫಲಿತಾಂಶಕ್ಕೆ ತಕ್ಕಂತೆ ನಡೆದುಕೊಂಡಿರುವ ಮಸ್ಕ್ ಇದೀಗ ತಾನು ಟ್ವಿಟ್ಟರ್ ಸಿಇಒ ಸ್ಥಾನದಿಂದ ಕೆಳಗಿಳಿಯಬೇಕಾ ಎಂಬ ಪ್ರಶ್ನೆಯೊಂದಿಗೆ ಸಮೀಕ್ಷೆ ಪ್ರಾರಂಭಿಸಿದ್ದಾರೆ.

ಹೌದು, ಇತ್ತೀಚೆಗಷ್ಟೇ ಟ್ವಿಟ್ಟರ್ ಅನ್ನು ಖರೀದಿಸಿದ ಬಿಲಿಯನೇರ್ ಎಲೋನ್ ಮಸ್ಕ್ ತಾವು ಅದರ ಸಿಇಒ ಸ್ಥಾನದಿಂದ ಕೆಳಗಿಳಿಯುವ ಬಗ್ಗೆ ಯೋಜನೆ ಮಾಡಿರುವುದು ತಿಳಿದುಬಂದಿದೆ.

ಮಸ್ಕ್ ತಾವು ಟ್ವಿಟ್ಟರ್ ಸಿಇಒ ಸ್ಥಾನದಿಂದ ಕೆಳಗಿಳಿಯಬೇಕೇ? ಎಂದು ಪ್ರಶ್ನೆಯನ್ನು ಕೇಳಿ ಸಮೀಕ್ಷೆಗೆ ‘ಎಸ್’ ಹಾಗೂ ‘ನೋ’ ಗಳಲ್ಲಿ ಒಂದನ್ನು ಆಯ್ಕೆ ಮಾಡುವಂತೆ ಬಳಕೆದಾರರಲ್ಲಿ ಕೇಳಿದ್ದಾರೆ.

ಮಸ್ಕ್ ಕೇವಲ ಸಮೀಕ್ಷೆಯನ್ನು ನಡೆಸದೇ ಇದರ ಫಲಿತಾಂಶಕ್ಕೆ ಬದ್ಧನಾಗಿರುವುದಾಗಿ ತಿಳಿಸಿದ್ದಾರೆ. ವೋಟ್ ಮಾಡುವಾಗ ಜಾಗರೂಕರಾಗಿರಿ. ಟ್ವಿಟ್ಟರ್ ಮುಖ್ಯಸ್ಥನಾಗಿ ನಾನು ಮುಂದುವರಿಯಬೇಕೇ ಅಥವಾ ಬೇಡವೇ ಎಂಬುದು ನಿಮ್ಮ ಕೈಯಲ್ಲಿದೆ ಎಂದು ಮಸ್ಕ್ ಬಳಕೆದಾರರಿಗೆ ಎಚ್ಚರಿಕೆಯನ್ನೂ ನೀಡಿದ್ದಾರೆ. 

 

Share this Story:

Follow Webdunia kannada

ಮುಂದಿನ ಸುದ್ದಿ

ಬ್ರಿಡ್ಜ್ ಉದ್ಘಾಟನೆಗೂ ಮುನ್ನ ಢಮಾರ್!