Select Your Language

Notifications

webdunia
webdunia
webdunia
webdunia

ಮೆದುಳಿಗೆ ಚಿಪ್ : ಶೀಘ್ರವೇ ಪರೀಕ್ಷಿಸಲಿದೆ ಮಸ್ಕ್ ಕಂಪನಿ

ಮೆದುಳಿಗೆ ಚಿಪ್ : ಶೀಘ್ರವೇ ಪರೀಕ್ಷಿಸಲಿದೆ ಮಸ್ಕ್ ಕಂಪನಿ
ವಾಷಿಂಗ್ಟನ್ , ಶನಿವಾರ, 3 ಡಿಸೆಂಬರ್ 2022 (14:34 IST)
ವಾಷಿಂಗ್ಟನ್ : ವಿಶ್ವದ ಶ್ರೀಮಂತ ಎಲೋನ್ ಮಸ್ಕ್ ಅವರ ನ್ಯೂರಾಲಿಂಕ್ ಕಂಪನಿ ಮಾನವರ ಮೆದುಳಿಗೆ ಅಳವಡಿಸಬಹುದಾದ ರೋಬೋಟ್ ಚಿಪ್ ಅನ್ನು ಶೀಘ್ರವೇ ಪರೀಕ್ಷಿಸಲಿದೆ ಎಂದು ತಿಳಿಸಿದ್ದಾರೆ.

ಈ ತಂತ್ರಜ್ಞಾನದ ಪರೀಕ್ಷೆಯ ಬಳಿಕ ಮಸ್ಕ್ ಸ್ವತಃ ಈ ಚಿಪ್ ಅನ್ನು ಹೊಂದಲು ಬಯಸಿರುವುದಾಗಿ ಹೇಳಿದ್ದಾರೆ.

ಮಸ್ಕ್ನ ಸ್ಟಾರ್ಟ್ಅಪ್ ನ್ಯೂರಾಲಿಂಕ್ ನಿರ್ಮಿಸಿರುವ ಈ ಚಿಪ್ ಮನುಷ್ಯನಿಗೆ ಅಳವಡಿಸಲಾದಲ್ಲಿ ಆತ ತನ್ನ ಆಲೋಚನೆಗಳ ಮೂಲಕ ನೇರವಾಗಿ ಕಂಪ್ಯೂಟರ್ಗಳೊಂದಿಗೆ ಸಂವಹನ ನಡೆಸಲು ಸಾಧ್ಯವಾಗಲಿದೆ ಎಂದು ತಿಳಿಸಿದ್ದಾರೆ.

ಈ ಚಿಪ್ಗೆ ಸಂಬಂಧಪಟ್ಟ ದಾಖಲೆಗಳನ್ನು ನಾವು ಎಫ್ಡಿಎಗೆ (ಅಮೆರಿಕದ ಫುಡ್ ಆಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್) ಸಲ್ಲಿಸಿದ್ದೇವೆ. ಅಲ್ಲಿಂದ ಅನುಮತಿ ಪಡೆದರೆ, ಇನ್ನು ಕೇವಲ 6 ತಿಂಗಳುಗಳಲ್ಲಿ ನಾವು ಮಾನವರಲ್ಲಿ ಮೊದಲ ಬಾರಿಗೆ ಚಿಪ್ ಅಳವಡಿಸಲು ಸಾಧ್ಯವಾಗಲಿದೆ ಎಂದು ಮಸ್ಕ್ ಹೇಳಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ಕಡಿಮೆಯಾಗುತ್ತಿದೆ ಸಿಟಿಯ ಟ್ರಾಫಿಕ್ ಸಮಸ್ಯೆ