ವಾಷಿಂಗ್ಟನ್ : ಸಮೀಕ್ಷೆ ಟ್ರಂಪ್ ಪರ ಹೆಚ್ಚು ಜನರ ಒಲವು ವ್ಯಕ್ತವಾದ ಹಿನ್ನೆಲೆಯಲ್ಲಿ ಮಸ್ಕ್ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಟ್ವಿಟ್ಟರ್ ಖಾತೆಯ ಮರುಸ್ಥಾಪನೆಯಾಗಲಿದೆ.
									
			
			 
 			
 
 			
					
			        							
								
																	ಎಲೋನ್ ಮಸ್ಕ್ ಟ್ರಂಪ್ ಅವರ ಟ್ವಿಟ್ಟರ್ ಖಾತೆಯನ್ನು ಮರಳಿ ತರುವ ಬಗ್ಗೆ ಜಾಗತಿಕ ಬಳಕೆದಾರರಿಂದ ಅಭಿಪ್ರಾಯವನ್ನು ಸಂಗ್ರಹಿಸಿದ್ದಾರೆ. ಶನಿವಾರ ಈ ಬಗ್ಗೆ ಸಮೀಕ್ಷೆಯೊಂದನ್ನು ನಡೆಸಿದ್ದು,
									
										
								
																	ಅದರಲ್ಲಿ ಟ್ರಂಪ್ ಅವರ ಟ್ವಿಟ್ಟರ್ ಖಾತೆಯನ್ನು ಮರುಸ್ಥಾಪಿಸಬೇಕೇ ಅಥವಾ ಬೇಡವೇ ಎಂದು ಕೇಳಿದ್ದಾರೆ. ಇದಕ್ಕೆ ಹೌದು ಹಾಗೂ ಇಲ್ಲ ಎಂಬ 2 ಆಯ್ಕೆಗಳನ್ನೂ ನೀಡಿದ್ದು, ಹೆಚ್ಚಿನ ಜನರು ಟ್ರಂಪ್ ಅವರ ಖಾತೆಯನ್ನು ಮರುಸ್ಥಾಪಿಸಲು ಬೆಂಬಲ ನೀಡಿದ್ದಾರೆ.
									
											
							                     
							
							
			        							
								
																	ಸಮೀಕ್ಷೆಯಲ್ಲಿ ಟ್ರಂಪ್ ಪರವಾಗಿ ಜನರು ಗಂಟೆಗೆ ಸುಮಾರು 10 ಸಾವಿರ ಮತಗಳನ್ನು ಹಾಕಿದ್ದಾರೆ ಎಂದು ಮಸ್ಕ್ ತಿಳಿಸಿದ್ದಾರೆ. ವಿಶ್ವಾದ್ಯಂತ 1,50,65,456 ಜನರು ಸಮೀಕ್ಷೆಯಲ್ಲಿ ವೋಟ್ ಹಾಕಿದ್ದಾರೆ. ಶೇ.51.8 ರಷ್ಟು ಜನರು ಟ್ರಂಪ್ ಪರವಾಗಿ ಹಾಗೂ ಶೇ.48.2 ರಷ್ಟು ಜನರು ಟ್ರಂಪ್ ವಿರುದ್ಧ ಮತ ಹಾಕಿದ್ದಾರೆ.