ವಾಷಿಂಗ್ಟನ್ : ಟೆಸ್ಲಾ ಸಿಇಒ ಎಲೋನ್ ಮಸ್ಕ್ ಟ್ವಿಟ್ಟರ್ ಅನ್ನು ಸ್ವಾಧೀನಪಡಿಸಿಕೊಳ್ಳುವುದಕ್ಕೂ ಮೊದಲೇ ಅದರ ಅನಗತ್ಯ ಉದ್ಯೋಗಿಗಳನ್ನು ಸಾಮೂಹಿಕವಾಗಿ ವಜಾಗೊಳಿಸುವ ಬಗ್ಗೆ ತಿಳಿಸಿದ್ದರು.
ಇದೀಗ ಮಸ್ಕ್ ಟ್ವಿಟ್ಟರ್ನ ಮಾಲೀಕನಾಗಿ 1 ವಾರ ಕಳೆದಿದ್ದು, ಉದ್ಯೋಗಿಗಳನ್ನು ವಜಾಗೊಳಿಸಲು ಈಗಿಂದಲೇ ಪ್ರಾರಂಭಿಸುವ ಸುಳಿವು ನೀಡಿದ್ದಾರೆ.
ಶುಕ್ರವಾರ ಬೆಳಗ್ಗೆ ಈ ಬಗ್ಗೆ ಕಂಪನಿ ತನ್ನ ಉದ್ಯೋಗಿಗಳಿಗೆ ಮೇಲ್ ಮಾಡಿದೆ. ಅದರಲ್ಲಿ ಟ್ವಿಟ್ಟರ್ ಅನ್ನು ಆರೋಗ್ಯಕರ ಹಾದಿಯಲ್ಲಿ ಇರಿಸುವ ಪ್ರಯತ್ನವಾಗಿ ನಾವು ಜಾಗತಿಕವಾಗಿ ಉದ್ಯೋಗಿಗಳನ್ನು ಕಡಿತಗೊಳಿಸುವ ಪ್ರಕ್ರಿಯೆಯನ್ನು ಕೈಗೊಳ್ಳುವುದಾಗಿ ತಿಳಿಸಲಾಗಿದೆ.