Select Your Language

Notifications

webdunia
webdunia
webdunia
webdunia

ತಾಜ್ ಮಹಲ್‍ಗೆ ನೋಟಿಸ್ ನೀಡಿದ ಸರ್ಕಾರ?

ತಾಜ್ ಮಹಲ್‍ಗೆ  ನೋಟಿಸ್   ನೀಡಿದ ಸರ್ಕಾರ?
ಲಕ್ನೋ , ಬುಧವಾರ, 21 ಡಿಸೆಂಬರ್ 2022 (10:56 IST)
ಲಕ್ನೋ : ಪ್ರತಿವರ್ಷ ಲಕ್ಷಾಂತರ ಪ್ರವಾಸಿಗರನ್ನು ಭಾರತಕ್ಕೆ ಸೆಳೆಯುವ ಆಗ್ರಾದ ತಾಜ್ ಮಹಲ್ ಕಟ್ಟಡಕ್ಕೆ ಆಸ್ತಿ ತೆರಿಗೆ ಹಾಗೂ ನೀರಿನ ಬಿಲ್‍ಗಳನ್ನು ಪಾವತಿಸುವಂತೆ ಮೊದಲ ಬಾರಿಗೆ ಯುಪಿ ಸರ್ಕಾರ ನೋಟಿಸ್ ನೀಡಿದೆ.

ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರದ ವಿವಿಧ ಘಟಕಗಳು 320 ವರ್ಷಗಳ ಇತಿಹಾಸ ಇರುವ ಆಗ್ರಾದ ತಾಜ್ ಮಹಲ್ ಹಾಗೂ ಆಗ್ರಾ ಕೋಟೆ ಎರಡಕ್ಕೂ ಬಾಕಿ ಬಿಲ್‍ಗಳನ್ನು ಪಾವತಿಸುವಂತೆ ನೋಟಿಸ್ ನೀಡಿದೆ.

ಬಿಲ್‍ಗಳ ಮೊತ್ತ 1 ಕೋಟಿಗೂ ಹೆಚ್ಚು ಬಾಕಿ ಇದೆ ಎಂದು ಎಎಸ್‍ಐಗೆ ತಿಳಿಸಿದೆ. ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ (ಎಎಸ್‍ಐ) ಅಧಿಕಾರಿಗಳು ಇದು, ತಪ್ಪು, ಶೀಘ್ರದಲ್ಲೇ ಸರಿಪಡಿಸಲಾಗುವುದು ಎಂದು ತಿಳಿಸಿದರು.

 

Share this Story:

Follow Webdunia kannada

ಮುಂದಿನ ಸುದ್ದಿ

ಮಹಾರಾಷ್ಟ್ರ ಯಾವುದೇ ಕಾರಣಕ್ಕೂ ಹಿಂದೆ ಸರಿಯುವ ಪ್ರಶ್ನೆಯಿಲ್ಲ: ದೇವೇಂದ್ರ ಫಡ್ನವಿಸ್