ಮುಂಬೈ: ಸಿನಿಮಾ ಸ್ಟಾರ್ ಗಳು ತಮ್ಮ ಖಾಸಗಿ ಬದುಕನ್ನು ಖಾಸಗಿಯಾಗಿಯೇ ಇಟ್ಟುಕೊಳ್ಳಲು ಬಯಸುತ್ತಾರೆ. ಆದರೆ ಧಕ್ಕೆಯಾದಾಗ ಸಿಟ್ಟಿಗೇಳುವ ಅನೇಕ ಪ್ರಕರಣಗಳನ್ನು ನೋಡಿದ್ದೇವೆ.
ಇದೀಗ ಜ್ಯೂ ಎನ್ ಟಿಆರ್ ಅಭಿಮಾನಿಯ ಮೇಲೆ ಸಿಟ್ಟಿಗೆದ್ದ ಘಟನೆ ನಡೆದಿದೆ. ಜ್ಯೂ ಎನ್ ಟಿಆರ್ ಇದೀಗ ವಾರ್ 2 ಸಿನಿಮಾ ಶೂಟಿಂಗ್ ಗಾಗಿ ಮುಂಬೈನಲ್ಲಿ ಬೀಡುಬಿಟ್ಟಿದ್ದಾರೆ. ಮುಂಬೈನ ಐಷಾರಾಮಿ ಹೋಟೆಲ್ ನಲ್ಲಿ ತಾರಕ್ ಉಳಿದುಕೊಂಡಿದ್ದಾರೆ. ಅಲ್ಲಿಯೂ ಅವರಿಗೆ ಅಭಿಮಾನಿಗಳು ಕಡಿಮೆಯೇನಲ್ಲ.
ಜ್ಯೂ ಎನ್ ಟಿಆರ್ ತಮ್ಮ ಫೋನ್ ನಲ್ಲಿ ಮಾತನಾಡುತ್ತಾ ಹೋಟೆಲ್ ರೂಂಗೆ ತೆರಳುತ್ತಾರೆ. ಈ ವೇಳೆ ಅವರ ಸೆಕ್ಯುರಿಟಿ ಗಾರ್ಡ್ ಗಳೂ ಜೊತೆಗಿರುತ್ತಾರೆ. ಆದರೆ ಅಭಿಮಾನಿಯೊಬ್ಬ ಕ್ಯಾಮರಾ ಹಿಡಿದುಕೊಂಡು ಜ್ಯೂ ಎನ್ ಟಿಆರ್ ನನ್ನು ಹಿಂಬಾಲಿಸುತ್ತಿರುತ್ತಾರೆ. ಮೊದಲು ಆತನನ್ನು ಜ್ಯೂ ಎನ್ ಟಿಆರ್ ಕಡೆಗಣಿಸುತ್ತಾರೆ.
ಆದರೆ ಆ ಅಭಿಮಾನಿ ಹಿಂಬಾಲಿಸುವುದನ್ನು ಮುಂದುವರಿಸಿದಾಗ ಸಿಟ್ಟಿಗೆದ್ದ ಜ್ಯೂ ಎನ್ ಟಿಆರ್ ಫೋನ್ ನಲ್ಲಿ ಮಾತನಾಡುವುದನ್ನೂ ನಿಲ್ಲಿಸಿ ಓಯ್ ಸಾಕು ನಿಲ್ಸಪ್ಪಾ ಎಂದು ಗದರುತ್ತಾರೆ. ಅಭಿಮಾನಿ ತನ್ನ ಖಾಸಗಿತನಕ್ಕೆ ಧಕ್ಕೆ ತಂದಿದ್ದು ಜ್ಯೂ ಎನ್ ಟಿಆರ್ ಗೆ ಸ್ವಲ್ಪವೂ ಇಷ್ಟವಾಗುವುದಿಲ್ಲ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.