Select Your Language

Notifications

webdunia
webdunia
webdunia
webdunia

ಅಮಿತಾಭ್ ಬಚ್ಚನ್ ಗೆ ಖ್ಯಾತಿ ತಂದುಕೊಟ್ಟ ಕೂಲಿ ಟೈಟಲ್ ನಲ್ಲಿ ರಜನೀಕಾಂತ್ ಸಿನಿಮಾ

Rajinikanth Coolie

Krishnaveni K

ಚೆನ್ನೈ , ಮಂಗಳವಾರ, 23 ಏಪ್ರಿಲ್ 2024 (09:33 IST)
Photo Courtesy: Twitter
ಚೆನ್ನೈ: ಸೂಪರ್ ಸ್ಟಾರ್ ರಜನೀಕಾಂತ್ ಮತ್ತು ಲೋಕೇಶ್ ಕನಗರಾಜು ಕಾಂಬಿನೇಷನ್ ನಲ್ಲಿ ಮೂಡಿಬರಲಿರುವ ಸಿನಿಮಾಗೆ ಟೈಟಲ್ ಫಿಕ್ಸ್ ಆಗಿದೆ. ಈ ಸಿನಿಮಾಗೆ ಕೂಲಿ ಎಂದು ಟೈಟಲ್ ಇಡಲಾಗಿದೆ.

ನಿನ್ನೆ ಸಂಜೆ ಚಿತ್ರತಂಡ ಟೈಟಲ್ ಅನಾವರಣಗೊಳಿಸಿದೆ. ಕೂಲಿ ಎಂಬ ಟೈಟಲ್ ಕೇಳಿದ ತಕ್ಷಣ ನಮಗೆ ನೆನಪಾಗುವುದು ಬಾಲಿವುಡ್ ನಲ್ಲಿ ಅಮಿತಾಭ್ ಬಚ್ಚನ್ ನಟಿಸಿದ್ದ ಕೂಲಿ ಸಿನಿಮಾ. ಈ ಸಿನಿಮಾಗೆ ಬಾಲಿವುಡ್ ಸೂಪರ್ ಸ್ಟಾರ್ ಗೆ ಅದೃಷ್ಟ ತಂದುಕೊಟ್ಟಿತ್ತು.

ಇದೀಗ ಅದೇ ಟೈಟಲ್ ನಲ್ಲಿ ಸೌತ್ ಸೂಪರ್ ಸ್ಟಾರ್ ರಜನೀಕಾಂತ್ ಸಿನಿಮಾ ಮಾಡಲು ಹೊರಟಿದ್ದಾರೆ. ತಲೈವರ್ 171 ನೇ ಸಿನಿಮಾದ ಟೈಟಲ್ ನೋಡಿ ಅಭಿಮಾನಿಗಳೂ ಇಷ್ಟವಾಗಿದೆ. ಲೋಕೇಶ್ ಕನಗರಾಜು-ರಜನೀಕಾಂತ್ ಕಾಂಬಿನೇಷನ್ ಎಂದರೆ ಕೇಳಬೇಕಾ ಇದು ಪಕ್ಕಾ ಮಾಸ್ ಸಿನಿಮಾ.

ವಿಶೇಷವೆಂದರೆ ಇದು ಮಾಫಿಯಾ ಜಗತ್ತಿನ ಕತೆ ಹೊಂದಿರುವ ಸಿನಿಮಾ ಇರಬಹುದು ಎಂದು ಫಸ್ಟ್ ಲುಕ್ ಪೋಸ್ಟರ್ ಸುಳಿವು ನೀಡುತ್ತಿದೆ. ಫಸ್ಟ್ ಲುಕ್ ಟೀಸರ್ ನಲ್ಲಿ ರಜನಿ ವಿಲನ್ ಗಳನ್ನು ಚೆಂಡಾಡುವ ದೃಶ್ಯವಿದೆ. ಹೀಗಾಗಿ ಇದು ರಜನಿ ಅಭಿಮಾನಿಗಳಿಗೆ ಇಷ್ಟವಾಗುವಂತಹ ಪಕ್ಕಾ ಮಾಸ್ ಸಿನಿಮಾ ಎನ್ನಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ಮತ್ತೊಂದು ಬಾಲಿವುಡ್ ಚಿತ್ರ ಒಪ್ಪಿಕೊಂಡಿದ್ದಾರಂತೆ ರಾಕಿಂಗ್ ಸ್ಟಾರ್ ಯಶ್