Select Your Language

Notifications

webdunia
webdunia
webdunia
webdunia

ರಾಜಕೀಯ ಪ್ರವೇಶ ಬೆನ್ನಲ್ಲೇ ದುಬಾರಿ ಕಾರು ಖರೀದಿಸಿದ ಕಂಗನಾ ರನೌತ್

Kangana Ranaut

Krishnaveni K

ಮುಂಬೈ , ಸೋಮವಾರ, 8 ಏಪ್ರಿಲ್ 2024 (11:12 IST)
ಮುಂಬೈ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಕಣಕ್ಕಿಳಿಯುತ್ತಿರುವ ನಟಿ ಕಂಗನಾ ರನೌತ್ ಈಗ ದುಬಾರಿ ಕಾರು ಖರೀದಿಸಿ ಸುದ್ದಿಯಾಗಿದ್ದಾರೆ.

ಕಂಗನಾ ಈ ಬಾರಿ ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ತಮ್ಮ ತವರೂರಿನಲ್ಲೇ ಕಂಗನಾ ಕಣಕ್ಕಿಳಿಯುತ್ತಿದ್ದಾರೆ. ಆದರೆ ಈ ನಡುವೆ ಅವರು ದುಬಾರಿ ಖರೀದಿ ಮಾಡಿ ಸುದ್ದಿಯಾಗಿದ್ದಾರೆ. ಬಾಲಿವುಡ್ ನಟಿ ಕಂಗನಾ 2.43 ಕೋಟಿ ರೂ. ಬೆಲೆಯ ಕಾರು ಖರೀದಿ ಮಾಡಿದ್ದಾರೆ.

ಕಂಗನಾ ಖರೀದಿ ಮಾಡಿರುವುದು Mercedes-Maybach ಕಾರನ್ನು. ಈಗಾಗಲೇ ಕಂಗನಾ ಬಳಿ ಮರ್ಸಿಡಸ್ ಸೀರೀಸ್ ನ ಕಾರಿದೆ. ಇದೀಗ ಮತ್ತೊಂದು ಅಂತಹದ್ದೇ ಕಾರು ಖರೀದಿ ಮಾಡಿ ಸುದ್ದಿಯಾಗಿದ್ದಾರೆ. ಇದಕ್ಕೆ ಮೊದಲು ಅವರ ಬಳಿ ಎಸ್ 680 ಸೀರೀಸ್ ನ ಕಾರಿದೆ. ಈ ಕಾರಿನ ಬೆಲೆ 3.6 ಕೋಟಿ ರೂ.

ಕಂಗನಾ ಬಳಿ ದುಬಾರಿ ಕಾರುಗಳ ಸಂಗ್ರಹವೇ ಇದೆ. ಇದಲ್ಲದೆ ಬಿಎಂಡಬ್ಲ್ಲು, ಆಡಿ ಕ್ಯು3, ಮರ್ಸಿಡಸ್ ಕಾರುಗಳ ಸಂಗ್ರಹವೇ ಅವರ ಬಳಿಯಿದೆ. ಇತ್ತೀಚೆಗಷ್ಟೇ ರಾಜಕೀಯಕ್ಕೆ ಎಂಟ್ರಿ ಕೊಟ್ಟ ಕಂಗನಾ ಈಗ ಕಾರು ಖರೀದಿ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಹೆಣ್ಣನ್ನು ನಿಂದಿಸಿದರೆ ಉದ್ದಾರ ಆಗಲ್ಲ: ದೊಡ್ಮನೆ ಸೊಸೆಯ ಬೆಂಬಲಕ್ಕೆ ನಿಂತ ಜಗ್ಗೇಶ್