ಮುಂಬೈ: ಬಚ್ಚನ್ ಕುಟುಂಬದಲ್ಲಿ ಎಲ್ಲವೂ ಸರಿಯಿಲ್ಲ ಎಂದು ಆಗಾಗ ವರದಿಯಾಗುತ್ತಲೇ ಇರುತ್ತವೆ. ಇದು ಎಷ್ಟು ನಿಜವೋ, ಎಷ್ಟು ಸುಳ್ಳೋ ಗೊತ್ತಿಲ್ಲ. ಆದರೆ ಇದೀಗ ಶ್ವೇತಾ ಮಗಳು ನವ್ಯಾ ನಂದಾ ನೀಡಿದ್ದಾರೆನ್ನಲಾದ ಹೇಳಿಕೆಯೊಂದು ವೈರಲ್ ಆಗಿದೆ.
ಅಮಿತಾಭ್ ಬಚ್ಚನ್ ಮೊಮ್ಮಗಳು ನವ್ಯಾ ವಾಟ್ ದಿ ಹೆಲ್ ನವ್ಯಾ 2 ಎಂಬ ಶೋ ನಡೆಸಿಕೊಡುತ್ತಾರೆ. ಈ ಶೋನಲ್ಲಿ ನವ್ಯಾ ತಮ್ಮ ಕುಟುಂಬದರನ್ನು ಆಹ್ವಾನಿಸಿ ಸಂದರ್ಶನ ಮಾಡಿದ್ದಾರೆ. ಈ ಬಾರಿ ಅಜ್ಜಿ ಜಯಾ ಬಚ್ಚನ್ ಮತ್ತು ತಾಯಿ ಶ್ವೇತಾ ನಂದಾರನ್ನು ಕರೆತಂದಿದ್ದಾರೆ.
ಈ ವೇಳೆ ನವ್ಯಾಗೆ ಶೋಗೆ ಅಮಿತಾಭ್ ಬಚ್ಚನ್, ಅಭಿಷೇಕ್ ಬಚ್ಚನ್ ಅವರನ್ನೂ ಆಹ್ವಾನಿಸುತ್ತೀರಾ ಎಂದು ಪ್ರಶ್ನಿಸಲಾಗಿದೆ. ಆಗ ನವ್ಯಾ ಮೂರನೇ ಸೀಸನ್ ಇದ್ದರೆ ಕರೆಸುತ್ತೇನೆ. ಅವರನ್ನು ಮಾತ್ರವಲ್ಲ ಹೊರಗಿನವರನ್ನೂ ಕರೆಸುತ್ತೇನೆ ಎಂದಿದ್ದರು. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇದನ್ನು ನೋಡಿ ಕೆಲವರು ಐಶ್ವರ್ಯಾರನ್ನು ಹೊರಗಿನವರು ಎಂದು ನವ್ಯಾ ಕರೆದಿದ್ದಾರೆ ಎಂದು ತಪ್ಪಾಗಿ ತಿಳಿದು ವಿವಾದ ಸೃಷ್ಟಿಸಿದ್ದಾರೆ. ಶ್ವೇತಾ ನಂದಾ ಮತ್ತು ಐಶ್ವರ್ಯಾಗೆ ಆಗಿಬರುತ್ತಿಲ್ಲ ಎಂದು ಹಲವು ಸಮಯದಿಂದ ರೂಮರ್ ಗಳಿದ್ದೇ ಇದೆ. ಅದರ ನಡುವೆ ಈ ವಿಡಿಯೋ ವೈರಲ್ ಆಗಿದೆ.