Select Your Language

Notifications

webdunia
webdunia
webdunia
webdunia

ಮಹಿಳೆಗೆ ಅವಾಚ್ಯ ಶಬ್ದಗಳಿಂದ ನಿಂದನೆ: ನಟ ಶಿವರಾಜ್ ಕೆ.ಆರ್‌.ಪೇಟೆ ವಿರುದ್ಧ ದೂರು

Shivaraj K R Pete

Sampriya

ಬೆಂಗಳೂರು , ಸೋಮವಾರ, 1 ಏಪ್ರಿಲ್ 2024 (18:21 IST)
photo Courtesy Instagram
ಬೆಂಗಳೂರು: ಮಹಿಳೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪದ ಮೇರೆಗೆ ಕಾಮಿಡಿ  ಕಿಲಾಡಿಗಳು ಖ್ಯಾತಿಯ ಶಿವರಾಜ್‌ ಕೆ.ಆರ್.ಪೇಟೆ ವಿರುದ್ಧ ಸುಬ್ರಹ್ಮಣ್ಯ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಹಿದೆ.

ಬೆಂಗಳೂರಿನ ರಸ್ತೆಯಲ್ಲಿ ಮಹಿಳೆ ಸ್ಕೂಟರ್‌ನಲ್ಲಿ ಹೋಗುವಾಗಿ ಹಿಂಬದಿಯಿಂದ ಅಡ್ಡಬಂದು ಕಿಟಕಿ ಗಾಜು ಇಳಿಸಿ 'ಯಾವಳೇ ನೀನು ಅಲ್ಲಾಡಿಸಿಕೊಂಡು' ಎಂದು ಮಹಿಳೆಗೆ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಪ್ರತಿನಿತ್ಯ ಹೋಗುವಂತೆ ನಾನು ಕಚೇರಿ ಕೆಲಸಕ್ಕೆ ಹೋಗುವಾಗ ಬೆಳಗ್ಗೆ 9.30ರ ಸುಮಾರಿಗೆ ಸ್ಪ್ರೆಕ್ಟ್ರಮ್‌ ಲ್ಯಾಬ್ ಮುಂಭಾಗದಿಂದಲೂ ಒಂದು ಕಾರು ನನ್ನ ಹಿಂದೆ ಬಂದಿತು. ಮುಂದೆ ರಾಜ್‌ ಕುಮಾರ್ ರಸ್ತೆಯ 10ನೇ ಕ್ರಾಸ್ ಬಳಿ ಪೆಟ್ರೋಲ್‌ ಬಂಕ್ ಹತ್ತಿರ ಬಂದಾಗ ಕಾರಿನ ಗಾಜು ಇಳಿಸಿ ಯಾವಳೇ ನೀನು ಅಲ್ಲಾಡಿಸಿಕೊಂಡು ಎಂದು ಬೈದರು. ನಾನು ಯಾರೆಂದು ತಿರುಗಿ ನೋಡಿದಾಗ ಕಾಮಿಡಿ ಕಿಲಾಡಿ ಖ್ಯಾತಿಯ ಶಿವರಾಜ್ ಕೆ.ಆರ್.ಪೇಟೆ ಎಂಬುದು ಗೊತ್ತಾಗಿದೆ. ಅವರು ನನಗೆ ಬೈದು ಸ್ನೇಹಿತರ ಜೊತೆಗೆ ನಗಾಡುತ್ತಾ ಹೋಗಿದ್ದಾರೆ. ಅವ್ಯಾಚ್ಯ ಶಬ್ದಗಳಿಂದ ಬೈದಿದ್ದೂ ಅಲ್ಲದೇ ನನ್ನ ಗಾಡಿಗೆ ಕಾರು ಟಚ್ ಮಾಡಿ ಹೋಗಿದ್ದಾರೆ ಎಂದು ಪೊಲೀಸ್ ಠಾಣೆಯಲ್ಲಿ ಮಹಿಳೆ ದೂರು ದಾಖಲಿಸಿದ್ದಾರೆ.

ದೂರಿನ ಸಂಬಂಧ ಎನ್ ಸಿಆರ್ ದಾಖಲಿಸಿಕೊಂಡ ಪೊಲೀಸರು ಶಿವರಾಜ್‌ಗೆ ನೊಟೀಸ್ ನೀಡಿದ್ದರು. ಇಂದು ಬೆಳಗ್ಗೆ ಶಿವರಾಜ್ ಕೆ ಆರ್ ಪೇಟೆ ವಿಚಾರಣೆಗೆ ಹಾಜರಾಗಿದ್ದರು. ಇದೇ ವೇಳೆ ಮಹಿಳೆಯನ್ನೂ ಪೊಲೀಸ್‌ ಠಾಣೆಗೆ ಕರೆಸಿ ಈ ಪ್ರಕರಣವನ್ನು ಬಗೆಹರಿಸಿ ಕಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ತೀವ್ರ ಸುಸ್ತು: ನಟ ಶಿವರಾಜ್‌ಕುಮಾರ್‌ ಆಸ್ಪತ್ರೆಗೆ ದಾಖಲು