Publish Date: Tue, 26 Dec 2023 (14:00 IST)
Updated Date: Tue, 26 Dec 2023 (14:18 IST)
ಬೆಂಗಳೂರಲ್ಲಿ ಮನೆ ಬೀಗ ಹೊಡೆದು ಕಳ್ಳರು ಕೈಚಳಕ ತೋರಿಸಿದ್ದಾರೆ.ಕಾಟನ್ ಪೇಟೆ ಪೊಲೀಸ್ ಠಾಣೆಯ ಅಕ್ಕಿಪೇಟೆಯಲ್ಲಿ ಘಟನೆ ನಡೆದಿದೆ.ಬಟ್ಟೆವ್ಯಾಪಾರಿ ಸಂಜಯ್ ಜೈನ್ ಎಂಬುವವರ ನಿವಾಸದಲ್ಲಿ ಕಳ್ಳತನವಾಗಿದೆ.ಸಂಜಯ್ ಜೈನ್ ಪತ್ನಿ ಮಕ್ಕಳು ಚಿತ್ರದುರ್ಗಕ್ಕೆ ತೆರಳಿದ್ರು.
ಸಂಜಯ್ ಜೈನ್ ರವರು ಮನೆ ಲಾಕ್ ಮಾಡಿ ಬಟ್ಟೆ ಶೋ ರೂಂ ಗೆ ತೆರಳಿದ್ದಾಗ ಕೃತ್ಯ ಎಸೆಗಿದ್ದಾರೆ.15 ಲಕ್ಷ ನಗದು 400 ಗ್ರಾಂ ಚಿನ್ನಾಭರಣ ಕಳ್ಳರು ಹೊತ್ತೊಯ್ದಿದ್ದಾರೆ.ಕಾಟನ್ ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕೃತ್ಯ ನಡೆದಿದ್ದು,ಘಟನಾ ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.