Select Your Language

Notifications

webdunia
webdunia
webdunia
webdunia

ರಾಜ್ಯ ಹೆದ್ದಾರಿ 81ರಲ್ಲಿ ಗುಂಡಿಗಳ ದರ್ಬಾರ್​

ರಾಜ್ಯ ಹೆದ್ದಾರಿ 81ರಲ್ಲಿ ಗುಂಡಿಗಳ ದರ್ಬಾರ್​
ಚಾಮರಾಜನಗರ , ಗುರುವಾರ, 21 ಸೆಪ್ಟಂಬರ್ 2023 (15:45 IST)
ಚಾಮರಾಜನಗರ-ಗುಂಡ್ಲುಪೇಟೆ ರಾಜ್ಯ ಹೆದ್ದಾರಿ 81ರ ಪರಿಸ್ಥಿತಿ ದೇವರಿಗೆ ಪ್ರೀತಿ ಎಂಬಂತಾಗಿದೆ. ರಸ್ತೆಗಳು ಗುಂಡಿಮಯವಾಗಿದ್ದು, ವಾಹನ ಸವಾರರು ಪರದಾಡುವಂತಾಗಿದೆ.. ರಾತ್ರಿ ವೇಳೆ ಅಪಘಾತ ಗ್ಯಾರಂಟಿ ಎಂಬಂತಾಗಿದೆ. ಹದಗೆಟ್ಟ ರಸ್ತೆಯಲ್ಲಿ ದಿನನಿತ್ಯ ವಾಹನ ಸವಾರರಿಗೆ ನರಕ ದರ್ಶನವಾಗ್ತಿದೆ. ರಸ್ತೆ ನಡುವೆ ದೊಡ್ಡ-ದೊಡ್ಡ ಗುಂಡಿಗಳು ನಿರ್ಮಾಣವಾಗಿದ್ದು, ಗುಂಡಿ ತಪ್ಪಿಸಲು ಹೋದ್ರೆ ಅನಾಹುತ ಖಚಿತ ಎಂಬಂತಾಗಿದೆ. ಅಷ್ಟೇ ಅಲ್ಲದೆ ಎದುರಿಗೆ ಬರೋ ವಾಹನ ಸವಾರರ ಜೊತೆ ಫೈಟಿಂಗ್ ಕೂಡ ಸರ್ವೆಸಾಮಾನ್ಯವಾಗಿಬಿಟ್ಟಿದೆ. ಅಧಿಕಾರಿಗಳ ಗಮನಕ್ಕೆ ತಂದ್ರೂ ಈ ಬಗ್ಗೆ ಹೇಳೋರಿಲ್ಲ, ಕೇಳೋರಿಲ್ಲ ಎಂಬಂತಾಗಿದೆ. ನೂರಾರು ಜನ ಬಿದ್ದು ಗಾಯಗೊಂಡ್ರೂ ಜನಪ್ರತಿನಿಧಿಗಳು ಈ ಕಡೆ ಗಮನಹರಿಸಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ಕಾವೇರಿ ವಿಚಾರಕ್ಕೆ ಅಶೋಕ್ ಕಿಡಿ