ಜಾಮ್ ನಗರ: ಅನಂತ್ ಅಂಬಾನಿ ಪ್ರಿ ವೆಡ್ಡಿಂಗ್ ಕಾರ್ಯಕ್ರಮಕ್ಕೆ ಬಂದಿದ್ದ ಐಶ್ವರ್ಯಾ ರೈ ಬಚ್ಚನ್-ಅಭಿಷೇಕ್ ಬಚ್ಚನ್ ದಂಪತಿ ಪುತ್ರಿ ಆರಾಧ‍್ಯ ಬಚ್ಚನ್ ನೋಡಿ ನೆಟ್ಟಿಗರು ಮಿನಿ ಐಶ್ವರ್ಯಾ ಎನ್ನುತ್ತಿದ್ದಾರೆ.
ಇದುವರೆಗೆ ಆರಾಧ‍್ಯ ಹಣೆ ಮುಚ್ಚುವಂತಹ ಹೇರ್ ಸ್ಟೈಲ್ ಮಾಡುತ್ತಿದ್ದರು. ಅದರೆ ಅನಂತ್ ಅಂಬಾನಿ ಪ್ರಿ ವೆಡ್ಡಿಂಗ್ ಕಾರ್ಯಕ್ರಮಕ್ಕೆ ಹೊಸ ಹೇರ್ ಸ್ಟೈಲ್ ನಲ್ಲಿ ಬಂದಿದ್ದಾರೆ. ಮುಖ ಕಾಣುವಂತೆ ಹೇರ್ ಸ್ಟೈಲ್ ಮಾಡಿಕೊಂಡು ಸಖತ್ ಸ್ಟೈಲಿಶ್ ಆಗಿ ಜಾಮ್ ನಗರಕ್ಕೆ ಬಂದಿದ್ದರು.
ಆರಾಧ‍್ಯ ಹೇರ್ ಸ್ಟೈಲ್ ನೋಡಿ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಹೇರ್ ಸ್ಟೈಲ್ ನಲ್ಲಿ ಆರಾಧ‍್ಯಳನ್ನು ಥೇಟ್ ಹಳೆಯ ಐಶ್ವರ್ಯಾರನ್ನು ನೋಡಿದಂತೇ ಆಗುತ್ತಿದೆ ಎಂದು ಹಲವರು ಕಾಮೆಂಟ್ ಮಾಡಿದ್ದಾರೆ. ಜೊತೆಗೆ ಕೆಲವರು ಕೊನೆಗೂ ಹಣೆ ಕಾಣುವಂತೆ ಹೇರ್ ಸ್ಟೈಲ್ ಮಾಡಿಕೊಂಡಿದ್ದಕ್ಕೆ ಥ್ಯಾಂಕ್ಸ್ ಎಂದಿದ್ದಾರೆ.
ಅನಂತ್ ಅಂಬಾನಿ ಪ್ರಿ ವೆಡ್ಡಿಂಗ್ ಕಾರ್ಯಕ್ರಮ ಜಾಮ್ ನಗರದಲ್ಲಿ ಅದ್ಧೂರಿಯಾಗಿ ನೆರವೇರಿತ್ತು. ತಾರೆಯರ ದಂಡೇ ಇಲ್ಲಿಗೆ ಹರಿದುಬಂದಿತ್ತು. ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಪರಿವಾರವಿಡೀ ಕಾರ್ಯಕ್ರಮಕ್ಕೆ ಬಂದಿತ್ತು. ಆರಾಧ‍್ಯ ತನ್ನ ತಂದೆ ಅಭಿಷೇಕ್ ಮತ್ತು ತಾಯಿ ಐಶ್ವರ್ಯಾ ಜೊತೆ ಡ್ಯಾನ್ಸ್ ಮಾಡುತ್ತಿರುವ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.