Select Your Language

Notifications

webdunia
webdunia
webdunia
webdunia

ಮತದಾನದ ಹಕ್ಕು ಚಲಾಯಿಸಿದ ಹಿರಿಯ ನಟಿ ಭಾರತಿ ವಿಷ್ಣುವರ್ಧನ್, ನಟ ಅನಿರುದ್ಧ್ ಜತ್ಕಾರ್

Bharathi Vishnuvardhan-Aniruddh

Krishnaveni K

ಬೆಂಗಳೂರು , ಶುಕ್ರವಾರ, 26 ಏಪ್ರಿಲ್ 2024 (13:28 IST)
ಬೆಂಗಳೂರು: ಕರ್ನಾಟಕದಲ್ಲಿ ಇಂದು ಲೋಕಸಭೆ  ಚುನಾವಣೆಯ ಮೊದಲ ಹಂತದ ಮತದಾನ ಪ್ರಕ್ರಿಯೆ ನಡೆಯುತ್ತಿದೆ. ಬೆಳ್ಳಂ ಬೆಳಿಗ್ಗೆಯೇ ಅನೇಕ ಸ್ಯಾಂಡಲ್ ವುಡ್ ಸೆಲೆಬ್ರಿಟಿಗಳು ತಮ್ಮ ಮತಗಟ್ಟೆಗೆ ಬಂದು ಮತ ಚಲಾಯಿಸಿದ್ದಾರೆ.
 

ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಇಂದು ಜಯನಗರ 4 ಟಿ ಬ್ಲಾಕ್ ನ ಬೂತ್ ನಂ.50 ರಲ್ಲಿ ತಮ್ಮ ಮತದಾನದ ಹಕ್ಕು ಚಲಾಯಿಸಿದರು. ಇನ್ನು ಅವರ ಅಳಿಯ, ನಟ ಅನಿರುದ್ಧ್ ಜತ್ಕಾರ್ ಜೆಪಿ ನಗರ 2 ಫೇಸ್ ನ ಬೂತ್ ನಂ.172 ರಲ್ಲಿ ಮತದಾನ ಮಾಡಿದ್ದಾರೆ. ಈ ಮೂಲಕ ಮತದಾನ ಮಾಡುವಂತೆ ತಮ್ಮ ಅಭಿಮಾನಿಗಳಿಗೂ ಪ್ರೇರಣೆ ನೀಡಿದ್ದಾರೆ.

ಇಂದು ಅನೇಕ ಸ್ಯಾಂಡಲ್ ವುಡ್ ಸೆಲೆಬ್ರಿಟಿಗಳು ಬೆಳಿಗ್ಗೆಯೇ ಮತಗಟ್ಟೆಗೆ ತೆರಳಿ ಕುಟುಂಬ ಸಮೇತರಾಗಿ ಮತ ಚಲಾಯಿಸಿ ತಮ್ಮ ಅಭಿಮಾನಿಗಳಿಗೆ ಮಾದರಿಯಾಗಿದ್ದಾರೆ. ಡಾ.ರಾಜ್ ಕುಮಾರ್ ಕುಟುಂಬದಿಂದ ರಾಘವೇಂದ್ರ ರಾಜ್ ಕುಮಾರ್, ಪುತ್ರ ವಿನಯ್ ರಾಜ್ ಕುಮಾರ್ ಬೆಳಿಗ್ಗೆಯೇ ಮತ ಚಲಾಯಿಸಿದ್ದಾರೆ.

ಇವರಲ್ಲದೆ ಗೋಲ್ಡನ್ ‍ಸ್ಟಾರ್ ಗಣೇಶ್, ಶ್ರೀಮುರಳಿ, ಡಾಲಿ ಧನಂಜಯ, ನವರಸನಾಯಕ ಜಗ್ಗೇಶ್, ಸಪ್ತಮಿಗೌಡ ಸೇರಿದಂತೆ ಅನೇಕ ಚಿತ್ರತಾರೆಯರು ಇಂದು ಮತದಾನದ ಹಕ್ಕು ಚಲಾಯಿಸಿ ತಮ್ಮ ಕರ್ತವ್ಯ ಸಲ್ಲಿಸಿದ್ದಾರೆ. ಚಿತ್ರತಾರೆಯರನ್ನು ಎಷ್ಟೋ ಅಭಿಮಾನಿಗಳು ಅನುಕರಿಸುತ್ತಾರೆ. ಹೀಗಾಗಿ ಸಿನಿ ತಾರೆಯರು ಮತದಾನ ಮಾಡುವುದು ಅವರ ಅಭಿಮಾನಿಗಳಿಗೂ ಪ್ರೇರಣೆ ನೀಡಿದಂತಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸೀರಿಯಲ್ ಲೋಕದ ಜ್ಯೂ ರಾಣಿ ಮುಖರ್ಜಿ ಇಶಿತಾ ವರ್ಷ ಬಗ್ಗೆ ಇಂಟ್ರೆಸ್ಟಿಂಗ್ ವಿಚಾರಗಳು ಇಲ್ಲಿವೆ