Select Your Language

Notifications

webdunia
webdunia
webdunia
webdunia

Karnataka Elections: ಸೂಟು ಬೂಟು ಹಾಕಿಕೊಂಡು ಸ್ಟೈಲಾಗಿ ಮತದಾನ ಮಾಡಲು ಬಂದ ಜಮೀರ್ ಅಹಮ್ಮದ್

Zameer Ahmad

Krishnaveni K

ಬೆಂಗಳೂರು , ಶುಕ್ರವಾರ, 26 ಏಪ್ರಿಲ್ 2024 (12:54 IST)
ಬೆಂಗಳೂರು: ಕರ್ನಾಟಕ ಲೋಕಸಭೆ ಚುನಾವಣೆ 2024 ರಲ್ಲಿ ಇಂದು ಹಲವು ರಾಜಕೀಯ ನಾಯಕರೂ ಮತದಾನ ಮಾಡಿದ್ದಾರೆ. ಅದರಲ್ಲೂ ವಿಶೇಷವಾಗಿ ಜಮೀರ್ ಅಹಮ್ಮದ್ ಮತದಾನ ಮಾಡಲು ಸ್ಟೈಲಾಗಿ ಬಂದಿದ್ದು ಎಲ್ಲರ ಗಮನ ಸೆಳೆಯಿತು.

ಸೂಟು, ಬೂಟು ಜೊತೆಗೆ ಕಪ್ಪು ಕೂಲಿಂಗ್ ಗ್ಲಾಸ್ ಹಾಕಿಕೊಂಡು ಸಚಿವ ಜಮೀರ್ ಅಹಮ್ಮದ್ ಮತದಾನ ಮಾಡಲು ಫುಲ್ ರೆಡಿಯಾಗಿ ಬಂದಿದ್ದರು. ಶಿವನಗರದ ಮತಗಟ್ಟೆ 52 ರಲ್ಲಿ ಜಮೀರ್ ಅಹಮ್ಮದ್ ಮತದಾನ ಮಾಡಿದರು. ಬಳಿಕ ಮಾಧ‍್ಯಮಗಳಿಗೆ ಪೋಸ್ ನೀಡಿದ್ದಾರೆ.

ಇನ್ನು, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಮ್ಮ ತವರು ಸಾತನೂರಿನಲ್ಲಿ ಸಂಸಾರ ಸಮೇತರಾಗಿ ತೆರಳಿ ಮತ ಚಲಾಯಿಸಿದ್ದಾರೆ. ಅವರಿಗೆ ಸಹೋದರ ಡಿಕೆ ಸುರೇಶ್ ಕೂಡಾ ಸಾಥ್ ನೀಡಿದ್ದಾರೆ. ಡಿಕೆ ಸುರೇಶ್ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಅಭ್ಯರ್ಥಿಯೂ ಆಗಿದ್ದಾರೆ.

ಇನ್ನೊಂದೆಡೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರಿನಲ್ಲಿ ಪುತ್ರನ ಜೊತೆಗೆ ಬಂದು ಮತ ಚಲಾಯಿಸಿದ್ದಾರೆ. ಇವರು ಮಾತ್ರವಲ್ಲದೆ, ಕಾಂಗ್ರೆ‍ಸ್ ನಾಯಕರಾದ ದಿನೇಶ್ ಗುಂಡೂರಾವ್, ಅಭ್ಯರ್ಥಿ ಪ್ರೊ. ರಾಜೀವ್ ಗೌಡ ಸೇರಿದಂತೆ ಕಾಂಗ್ರೆಸ್ ನಾಯಕರು ತಮ್ಮ ಮತಗಟ್ಟೆಗಳಲ್ಲಿ ಮತ ಚಲಾಯಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಧಾನಿ ಮೋದಿಯನ್ನು ಚುನಾವಣೆಯಿಂದ ಅನರ್ಹಗೊಳಿಸಲು ಅರ್ಜಿ