Select Your Language

Notifications

webdunia
webdunia
webdunia
webdunia

ಪ್ರಧಾನಿ ಮೋದಿಯನ್ನು ಚುನಾವಣೆಯಿಂದ ಅನರ್ಹಗೊಳಿಸಲು ಅರ್ಜಿ

PM Modi

Krishnaveni K

ನವದೆಹಲಿ , ಶುಕ್ರವಾರ, 26 ಏಪ್ರಿಲ್ 2024 (12:42 IST)
ನವದೆಹಲಿ: ಧರ್ಮದ ಹೆಸರಿನಲ್ಲಿ ಪ್ರಚಾರ ಮಾಡಿದ ಆರೋಪದಲ್ಲಿ ಪ್ರಧಾನಿ ನರೇಂದ್ರ ಮೋದಿಯನ್ನು 6 ವರ್ಷಗಳ ಕಾಲ ಚುನಾವಣೆಯಿಂದ ಅನರ್ಹಗೊಳಿಸಬೇಕೆಂದು ದೆಹಲಿ ಹೈಕೋರ್ಟ್‍ ಗೆ ಅರ್ಜಿ ಸಲ್ಲಿಸಲಾಗಿದೆ.

ಈ ಬಗ್ಗೆ ಸೋಮವಾರ ಅಂದರೆ ಏಪ್ರಿಲ್ 29 ರಂದು ವಿಚಾರಣೆ ನಡೆಯಲಿದೆ. ವಕೀಲ ಎಸ್ ಜೋಂಧಳೆ ಈ ಅರ್ಜಿ ಸಲ್ಲಿಸಿದ್ದಾರೆ. ಹಿಂದೂ, ಸಿಖ್ ದೇವರ ಹೆಸರಿನಲ್ಲಿ ಬಿಜೆಪಿ ಪರ ಪ್ರಧಾನಿ ಮೋದಿ ಮತ ಕೇಳಿದ್ದಾರೆ ಎಂದು ಅವರ ಮೇಲೆ ಆರೋಪ ಹೊರಿಸಿರುವ ಚುನಾವಣೆಯಿಂದ ಬಹಿಷ್ಕರಿಸುವಂತೆ ಮನವಿ ಮಾಡಿದ್ದಾರೆ.

ಏಪ್ರಿಲ್ 9 ರಂದು ಉತ್ತರ ಪ್ರದೇಶದಲ್ಲಿ ಚುನಾವಣಾ ಸಮಾವೇಶದಲ್ಲಿ ಹಿಂದೂ, ಸಿಖ್ಖರ ಧಾರ್ಮಿಕ ಕೇಂದ್ರಗಳ ಹೆಸರಿನಲ್ಲಿ ಅವರು ಮತ ಕೇಳಿದ್ದಾರೆ. ರಾಮಮಂದಿರ ನಿರ್ಮಾಣ ಮಾಡಿರುವುದು,ಅಫ್ಘಾನಿಸ್ತಾನದಿಂದ ಗುರು ಗ್ರಂಥ್ ಸಾಹಿಬ್ ನ ಪ್ರತಿಮೆಗಳನ್ನು ವಾಪಸ್ ತಂದಿರುವುದಾಗಿ ಹೇಳಿಕೊಂಡಿದ್ದರು.

ಪ್ರಧಾನಿ ಮೋದಿಯವರ ಈ ಭಾಷಣಗಳು ಕೋಮು ಸೌಹಾರ್ದ ಕದಡಬಹುದಾಗಿದೆ. ಇದು ಮಾದರಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣವಾಗಿದೆ.  ಹೀಗಾಗಿ ಅವರನ್ನು ಆರು ವರ್ಷ ಕಾಲ ಚುನಾವಣಾ ರಾಜಕಾರಣದಿಂದ ಅನರ್ಹಗೊಳಿಸಬೇಕು ಎಂದು ಜೋಂಧಳೆ ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

Lok Sabha Election 2024: ಮತದಾನ ಮಾಡಲು ಸ್ಟೈಲಾಗಿ ಬಂದ ಸಿಎಂ ಸಿದ್ದರಾಮಯ್ಯ