Select Your Language

Notifications

webdunia
webdunia
webdunia
webdunia

ಜ್ಯೂ ಎನ್ ಟಿಆರ್ ಸಿನಿಮಾ ಬಳಿಕ ಪ್ರಶಾಂತ್ ನೀಲ್ ಕನ್ನಡಕ್ಕೆ ಬರ್ತಾರೆ ಎನ್ನುವುದೆಲ್ಲಾ ಬರೀ ಸುಳ್ಳು!

Prashant Neel-Jr NTR

Krishnaveni K

ಹೈದರಾಬಾದ್ , ಗುರುವಾರ, 25 ಏಪ್ರಿಲ್ 2024 (12:38 IST)
ಹೈದರಾಬಾದ್: ಕನ್ನಡದಲ್ಲಿ ಮೊದಲು ಅವಕಾಶ ಪಡೆದು ಬಳಿಕ ಪರಭಾಷೆಗಳಿಗೆ ಲಗ್ಗೆಯಿಟ್ಟ ಅನೇಕ ಕಲಾವಿದರು, ತಂತ್ರಜ್ಞರು ಇದ್ದಾರೆ. ಅವರ ಪೈಕಿ ಪ್ರಶಾಂತ್ ನೀಲ್ ಕೂಡಾ ಒಬ್ಬರು.

ಪ್ರಶಾಂತ್ ನೀಲ್ ಗೆ ಹೆಸರು ತಂದುಕೊಟ್ಟಿದ್ದು ಕನ್ನಡದಲ್ಲಿ ಉಗ್ರಂ ಮತ್ತು ಕೆಜಿಎಫ್ 1, 2 ಸಿನಿಮಾಗಳು. ಈ ಎರಡು ಸಿನಿಮಾಗಳ ಮೂಲಕ ಕನ್ನಡ ಚಿತ್ರರಂಗಕ್ಕೆ ದೇಶೀಯ ಮಟ್ಟದಲ್ಲಿ ಮಾರುಕಟ್ಟೆ ತೆರೆದುಕೊಟ್ಟ ಖ್ಯಾತಿಯೂ ಪ್ರಶಾಂತ್ ನೀಲ್ ರದ್ದು. ಈ ಎರಡು ಸಿನಿಮಾಗಳ ಮೂಲಕ ಕೋಟ್ಯಾಂತರ ರೂಪಾಯಿ ಕಮಾಯಿ ಮಾಡುವುದು ಹೇಗೆಂದು ಇತರರಿಗೂ ಕಲಿಸಿಕೊಟ್ಟವರು.

ಈ ಎರಡು ಸಿನಿಮಾಗಳನ್ನು ನೋಡಿ ತೆಲುಗು ಸ್ಟಾರ್ ನಟರು ಪ್ರಶಾಂತ್ ನೀಲ್ ಮುಂದೆ ಕ್ಯೂ ನಿಂತರು. ಪರಿಣಾಮ, ಪ್ರಭಾಸ್ ಜೊತೆಗೆ ಸಲಾರ್ ಮುಗಿಸಿದ ಪ್ರಶಾಂತ್ ನೀಲ್ ಈಗ ಜ್ಯೂ ಎನ್ ಟಿಆರ್ ಜೊತೆ ಸಿನಿಮಾ ಮಾಡುವ ತಯಾರಿಯಲ್ಲಿದ್ದಾರೆ. ಇದಾದ ಬಳಿಕ ಮತ್ತೆ ಪ್ರಶಾಂತ್ ನೀಲ್ ಕನ್ನಡಕ್ಕೆ ಬರಲಿದ್ದಾರೆ, ಕೆಜಿಎಫ್ 3 ಮಾಡಬಹುದು ಎಂದು ಎಲ್ಲರ ಲೆಕ್ಕಾಚಾರವಾಗಿತ್ತು.

ಆದರೆ ಇತ್ತೀಚೆಗೆ ಪ್ರಶಾಂತ್ ನೀಲ್ ಟಾಲಿವುಡ್ ಸ್ಟಾರ್ ವಿಜಯ್ ದೇವರಕೊಂಡ ಅವರನ್ನು ಭೇಟಿಯಾಗಿದ್ದಾರೆ. ಇವರಿಬ್ಬರೂ ಸೇರಿಕೊಂಡು ಸಿನಿಮಾ ಮಾಡಲಿದ್ದಾರೆ ಎಂಬ ಗುಸು ಗುಸು ಹರಿದಾಡುತ್ತಿದೆ. ಒಂದು ವೇಳೆ ಇದು ನಿಜವಾದರೆ ಕನ್ನಡಕ್ಕೆ ಸದ್ಯಕ್ಕಂತೂ ಪ್ರಶಾಂತ್ ನೀಲ್ ಬರಲ್ಲ. ಸದ್ಯಕ್ಕಂತೂ ತೆಲುಗಿನಲ್ಲೇ ಝಾಂಡಾ ಹೂಡುವ ರೀತಿ ಕಾಣಿಸುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕ್ರಿಕೆಟ್ ಟೂರಿಂಗ್ ವೇಳೆ ಲ್ಯಾಪ್ ಟಾಪ್ ನಲ್ಲಿ ಕನ್ನಡ ಹಾಡು ಹಾಕಿಕೊಂಡು ಹೋಗುತ್ತಿದ್ದೆ: ಅನಿಲ್ ಕುಂಬ್ಳೆ