Select Your Language

Notifications

webdunia
webdunia
webdunia
webdunia

ಕ್ರಿಕೆಟ್ ಟೂರಿಂಗ್ ವೇಳೆ ಲ್ಯಾಪ್ ಟಾಪ್ ನಲ್ಲಿ ಕನ್ನಡ ಹಾಡು ಹಾಕಿಕೊಂಡು ಹೋಗುತ್ತಿದ್ದೆ: ಅನಿಲ್ ಕುಂಬ್ಳೆ

Anil Kumble

Krishnaveni K

ಬೆಂಗಳೂರು , ಗುರುವಾರ, 25 ಏಪ್ರಿಲ್ 2024 (12:06 IST)
ಬೆಂಗಳೂರು: ವಿಶ್ವದ ದಿಗ್ಗಜ ಸ್ಪಿನ್ನರ್ ಗಳಲ್ಲಿ ಒಬ್ಬರಾದ ನಮ್ಮ ಕನ್ನಡಿಗ ಅನಿಲ್ ಕುಂಬ್ಳೆ ತಮ್ಮ ಕನ್ನಡ ಪ್ರೇಮದ ಬಗ್ಗೆ ಇಂದ್ರಜಿತ್ ಲಂಕೇಶ್ ಪುತ್ರ ಸಮರ್ಜಿತ್ ಲಂಕೇಶ್ ನಾಯಕರಾಗಿರುವ ಸಿನಿಮಾ ಗೌರಿ ಪ್ರಿ ಟೀಸರ್ ಈವೆಂಟ್ ನಲ್ಲಿ ಮಾತನಾಡಿದ್ದಾರೆ.

ಅನಿಲ್ ಕುಂಬ್ಳೆ ಕನ್ನಡದ ಕಾರ್ಯಕ್ರಮದಲ್ಲಿ ಅಪ್ಪಟ ಕನ್ನಡದಲ್ಲೇ ಮಾತನಾಡುತ್ತಾರೆ. ಕನ್ನಡ ಚಿತ್ರರಂಗದ ಅನೇಕರೊಂದಿಗೆ ಅನಿಲ್ ಕುಂಬ್ಳೆಗೆ ಉತ್ತಮ ಸ್ನೇಹ ಸಂಬಂಧವಿದೆ. ಅವರಲ್ಲಿ ಇಂದ್ರಜಿತ್ ಲಂಕೇಶ್ ಕೂಡಾ ಒಬ್ಬರು. ಇಂದ್ರಜಿತ್ ಲಂಕೇಶ್ ಅವರ ಪುತ್ರನ ಸಿನಿಮಾ ಕಾರ್ಯಕ್ರಮದಲ್ಲಿ ಕುಂಬ್ಳೆ ತಮ್ಮ ಕನ್ನಡ ಪ್ರೇಮ, ಕನ್ನಡ ಸಿನಿಮಾಗಳ ಬಗ್ಗೆ ತಮ್ಮ ಪ್ರೀತಿಯನ್ನು ಹೇಳಿಕೊಂಡಿದ್ದಾರೆ.

‘ನನ್ನ ವೃತ್ತಿ ಜೀವನದ ಸಂದರ್ಭದಲ್ಲಿ ವಿದೇಶಗಳಿಗೆ ಹೋಗುವಾಗ ಎರಡು ದಿನ ಕಳೆದರೆ ಕನ್ನಡ ಹಾಡುಗಳನ್ನು ಕೇಳದೇ ಇರಲು ಆಗುತ್ತಿರಲಿಲ್ಲ. ಕನ್ನಡ ಹಾಡುಗಳೆಂದರೆ ಅಷ್ಟು ಇಷ್ಟ. ಆಗೆಲ್ಲಾ ಐಪ್ಯಾಡ್ ಇರಲಿಲ್ಲ. ಹೀಗಾಗಿ ಲ್ಯಾಪ್ ಟಾಪ್ ನಲ್ಲಿ ಡೌನ್ ಲೋಡ್ ಮಾಡಿಕೊಂಡು ಹೋಗುತ್ತಿದ್ದೆ. ವಿದೇಶದಲ್ಲಿದ್ದಾಗಲೂ ಕನ್ನಡ ಹಾಡುಗಳು ಕಿವಿಗೆ ಬಿದ್ದಾಗಲೇ ಸಮಾಧಾನವಾಗುತ್ತಿತ್ತು.

ಈ ಹಿಂದೆ ನಾನು ಪಂಜಾಬ್ ಕಿಂಗ್ಸ್ ತಂಡದಲ್ಲಿದ್ದಾಗ ಯಶ್ ಅವರ ಕೆಜಿಎಫ್ 2 ಸಿನಿಮಾದ ಪ್ರೋಮೋ ಹಾಕಿದ್ದರು. ಅದು ಹಿಂದಿ ವರ್ಷನ್ ಆಗಿತ್ತು. ಯಶ್ ಅವರು ಹಿಂದಿಯಲ್ಲಿ ಮಾತನಾಡುತ್ತಿದ್ದರೆ ನನಗೆ ಏನೂ ಅರ್ಥವಾಗುತ್ತಿರಲಿಲ್ಲ. ನಮ್ಮ ಕನ್ನಡದ ಸಿನಿಮಾಗಳನ್ನು ಕನ್ನಡದಲ್ಲಿ ನೋಡಿದರೇ ಚಂದ’ ಎಂದು ಅನಿಲ್ ಕುಂಬ್ಳೆ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿಜಯ್ ದೇವರಕೊಂಡ ಭೇಟಿಯಾದ ಕೆಜಿಎಫ್' ನಿರ್ದೇಶಕ ಪ್ರಶಾಂತ್ ನೀಲ್... ಹೊಸ ಪ್ರಾಜೆಕ್ಟ್‌ ಎಂದಾ ಅಭಿಮಾನಿಗಳು