Select Your Language

Notifications

webdunia
webdunia
webdunia
Thursday, 10 April 2025
webdunia

ನೇಹಾ ಪೋಷಕರನ್ನು ಭೇಟಿಯಾಗಿ ಸಾಂತ್ವನ ತುಂಬಿದ ಹರ್ಷಿಕಾ ಪೂಣಚ್ಚ ದಂಪತಿ

Hubballi Neha Murder Case

Sampriya

ಹುಬ್ಬಳ್ಳಿ , ಬುಧವಾರ, 24 ಏಪ್ರಿಲ್ 2024 (17:55 IST)
Photo Courtesy X
ಹುಬ್ಬಳ್ಳಿ: ಸ್ನೇಹಿತನಿಂದಲೇ ಹತ್ಯೆಗೀಡಾದ ನೇಹಾ ಹಿರೇಮಠ ಮನೆಗೆ ನಟಿ ಹರ್ಷಿಕಾ ಪೂಣಚ್ಚ ಮತ್ತು ಭುವನ್ ದಂಪತಿ ಭೇಟಿ ನೀಡಿ ಪೋಷಕರಿಗೆ ಸಾಂತ್ವನ ಹೇಳಿದರು.

ನಿರಂಜನ್ ಹಿರೇಮಠ ಹಾಗೂ ಪತ್ನಿ ಗೀತಾ ಅವರಲ್ಲಿ ಮಗಳು ನೇಹಾ ಬಗ್ಗೆ  ಹರ್ಷಿಕಾ ದಂಪತಿ ವಿಚಾರಿಸಿದ್ದಾರೆ. ಈ ವೇಳೆ ನೇಹಾ ಪೋಚಕರು ಭಾವುಕರಾಗಿದ್ದಾರೆ. ಕೊಲೆ ಮಾಡುವ ಹಕ್ಕು ಯಾರಿಗೂ ಇಲ್ಲ. ನೇಹಾ ಹತ್ಯೆಗೆ ನ್ಯಾಯ ಸಿಗಬೇಕೆಂದರು.

ಬೆಂಗಳೂರಿನ ಹೊಟೇಲ್‌ನಲ್ಲಿ ನಡೆದ ಹಲ್ಲೆಗೆ ಸಂಬಂಧಿಸಿದಂತೆ ಇಂದು ಬೆಳಿಗ್ಗೆ  ನಟಿ ಹರ್ಷಿಕಾ ಪೂಣಚ್ಚ ಮತ್ತು ಭುವನ್ ದಂಪತಿ ಇಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರನ್ನು ಭೇಟಿಯಾಗಿ ಚರ್ಚಿಸಿದರು.

ಸಚಿವರಲ್ಲಿ, 'ಬೆಂಗಳೂರಿನಲ್ಲಿ ಕನ್ನಡ ಮಾತನಾಡಿದ್ದಕ್ಕೆ ಕೆಲವು ಕಿಡಿಗೇಡಿಗಳು ಹಲ್ಲೆ ನಡೆಸಿ ಮೈಮೇಲಿದ್ದ ಚಿನ್ನಾಭರಣ ಕಿತ್ತುಕೊಳ್ಳಲು ಪ್ರಯತ್ನಿಸಿದ್ದರು. ಈ ಕುರಿತು ಪುಲಿಕೇಶಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇನೆ. ನನಗೆ ನ್ಯಾಯ ಕೊಡಿಸಬೇಕು' ಎಂದು ಮನವಿ ಮಾಡಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಹೊಸ ಗರ್ಲ್‌ಫ್ರೆಂಡ್ ಜತೆ ಟ್ರಿಪ್ ಎಂಜಾಯ್ ಮಾಡುತ್ತಿರುವ ನಾಗಚೈತನ್ಯ!