Refresh

This website m-kannada.webdunia.com/article/television-news-in-kannada/fraud-in-name-of-kannada-actor-skanda-ashok-124041200013_1.html is currently offline. Cloudflare's Always Online™ shows a snapshot of this web page from the Internet Archive's Wayback Machine. To check for the live version, click Refresh.

Select Your Language

Notifications

webdunia
webdunia
webdunia
webdunia

ಕಿರುತೆರೆ ನಟ ಸ್ಕಂದ ಅಶೋಕ್ ಗೆ ವಂಚನೆ: ದೂರು ಕೊಟ್ಟ ನಟ

Skanda Ashok

Krishnaveni K

ಬೆಂಗಳೂರು , ಶುಕ್ರವಾರ, 12 ಏಪ್ರಿಲ್ 2024 (11:53 IST)
ಬೆಂಗಳೂರು: ರಾಧಾ ರಮಣ ಧಾರವಾಹಿ ಖ್ಯಾತಿಯ ಖ್ಯಾತ ನಟ ಸ್ಕಂದ ಅಶೋಕ್ ಹೆಸರಿನಲ್ಲಿ ಹಣಕಾಸಿನ ವಂಚನೆ ಮಾಡುವ ಪ್ರಯತ್ನ ನಡೆದಿದ್ದು, ನಟ ಪೊಲೀಸರಿಗೆ ದೂರು ನೀಡಿದ್ದಾರೆ.

ಕನ್ನಡ ಕಿರುತೆರೆ ಮತ್ತು ಸ್ಯಾಂಡಲ್ ವುಡ್ ಸಿನಿಮಾಗಳಲ್ಲಿ ನಟಿಸಿ ತಮ್ಮದೇ ಅಭಿಮಾನಿ ಬಳಗವನ್ನು ಸೃಷ್ಟಿಸಿರುವ ನಟ ಸ್ಕಂದ ಅಶೋಕ್ ಹೆಸರಿನಲ್ಲಿ ಇನ್ ಸ್ಟಾಗ್ರಾಂನಲ್ಲಿ ವಂಚನೆಗೆ ಪ್ರಯತ್ನ ನಡೆದಿದೆ. ನಟನ ಇನ್ ಸ್ಟಾಗ್ರಾಂ ಖಾತೆ ಹ್ಯಾಕ್ ಮಾಡಿ ಅವರ ಪರಿಚಯದವರಿಗೆ ಸಂದೇಶ ಕಳುಹಿಸಿ ಹಣ ನೀಡುವಂತೆ ವಂಚಕರು ಬೇಡಿಕೆಯಿಟ್ಟಿದ್ದಾರೆ.

ಇದು ಸ್ಕಂದ ಅರಿವಿಗೆ ಬಂದಿದ್ದು, ತಕ್ಷಣವೇ ಸೈಬರ್ ಪೊಲೀಸರಿಗೆ ದೂರು ನೀಡಿದ್ದಾರೆ. ವಂಚಕರ ಹಿನ್ನಲೆ ಪರಿಶೀಲಿಸಿದಾಗ ಬೆಂಗಳೂರು, ಚೆನ್ನೈ ಮತ್ತು ನೈಜೀರಿಯಾ ಮೂಲ ತೋರಿಸುತ್ತಿದೆ. ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಈ ರೀತಿ ಸೆಲೆಬ್ರಿಟಿಗಳ ಸೋಷಿಯಲ್ ಮೀಡಿಯಾ ಖಾತೆ ಹ್ಯಾಕ್ ಮಾಡಿ ವಂಚನೆ ಮಾಡುವುದು ಇದೇ ಮೊದಲಲ್ಲ. ಹಲವು ಬಾರಿ ಅನೇಕ ತಾರೆಯರು ಈ ರೀತಿ ವಂಚನೆಗಳೊಗಾಗಿದ್ದು ಇದೆ.

Share this Story:

Follow Webdunia kannada

ಮುಂದಿನ ಸುದ್ದಿ

ಡಾ.ರಾಜ್ ಕುಮಾರ್ ಪುಣ್ಯತಿಥಿ: ಅಣ್ಣಾವ್ರು ಕೊನೆಯದಾಗಿ ಸೇವಿಸಿದ ಆಹಾರ ಇದುವೇ