Select Your Language

Notifications

webdunia
webdunia
webdunia
webdunia

ರಾಮಚಾರಿಯ ಚಾರು ಮೌನ ಗುಡ್ಡೆಮನೆ ಜೀವನದ ಈ ವಿಚಾರಗಳು ನಿಮಗೆ ಗೊತ್ತಾ?!

ರಾಮಚಾರಿಯ ಚಾರು ಮೌನ ಗುಡ್ಡೆಮನೆ ಜೀವನದ ಈ ವಿಚಾರಗಳು ನಿಮಗೆ ಗೊತ್ತಾ?!
ಬೆಂಗಳೂರು , ಭಾನುವಾರ, 25 ಜೂನ್ 2023 (08:50 IST)
Photo Courtesy: facebook
ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ರಾಮಚಾರಿ ಧಾರವಾಹಿಯಲ್ಲಿ ನಾಯಕಿ ಚಾರುಲತಾ ಪಾತ್ರದ ಮೂಲಕ ಜನರ ಮನ ಗೆದ್ದಿರುವ ಮೌನ ಗುಡ್ಡೆ ಮನೆ ಬಗ್ಗೆ ತಿಳಿದುಕೊಳ್ಳೋಣ.

ಚೆಂದುಳ್ಳಿ ಚೆಲುವೆ ಮೌನ ಹುಟ್ಟೂರು ಚಿಕ್ಕಮಗಳೂರು. ಆದರೆ ವಿದ್ಯಾಭ್ಯಾಸಕ್ಕಾಗಿ ತಾಯಿಯ ಆಸೆಯಂತೆ ಕಡಲ ತೀರ ಮಂಗಳೂರಿಗೆ ಬಂದರು. 1997 ರ ನವಂಬರ್ 2 ರಂದು ಜನಿಸಿದ ಮೌನಗೆ ಈಗ 25 ವರ್ಷ. ಈಕೆಗೆ ಒಬ್ಬ ಸಹೋದರಿಯೂ ಇದ್ದಾರೆ. ಮಂಗಳೂರಿನ ಸೈಂಟ್ ಅಲೋಷಿಯಸ್ ಕಾಲೇಜಿನಲ್ಲಿ ಪಿಯು ಓದಿರುವ ಮೌನ ಪದವಿ ಶಿಕ್ಷಣ ಮುಗಿಸಿದ್ದಾರೆ. ಮಿಸ್ ಟೀನ್ ತುಳುನಾಡು ರನ್ನರ್ ಅಪ್ ಪ್ರಶಸ್ತಿ ಗೆದ್ದವರು.

ಚಿಕ್ಕಂದಿನಿಂದಲೂ ಮಾಡೆಲಿಂಗ್ ಮೇಲೆ ಒಲವು. ಹೀಗಾಗಿ ಮನೆಯಲ್ಲಿ ಸುಳ್ಳು ಹೇಳಿ ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟಿದ್ದರಂತೆ. ಆದರೆ ಬಳಿಕ ಅದು ಸಾಕೆನಿಸಿ ಆ ವೃತ್ತಿ ಬಿಟ್ಟಿದ್ದರು. ಬಣ್ಣದ ಲೋಕದಲ್ಲಿ ಅವರ ಮೊದಲ ಪ್ರಾಜೆಕ್ಟ್ ರಾಮಚಾರಿ ಧಾರವಾಹಿ. ಚಾರು ಪಾತ್ರ ಮಾಡಲು ಹೊರಟಾಗಲೂ ಮನೆಯಲ್ಲಿ ಮೊದಲು ಹೇಗೋ ಎಂಬ ಭಯವಿತ್ತಂತೆ. ಆದರೆ ಕೊನೆಗೆ ಜನ ಸ್ವೀಕರಿಸುತ್ತಿದ್ದಂತೇ ಖುಷಿಪಟ್ಟಿದ್ದಾರೆ. ಇದೀಗ ಚಾರು ಆಗಿ ಜನರ ಮನಗೆದ್ದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಣ್ಣಾವ್ರು ಹೆಚ್ಚು ಸಿನಿಮಾ ಹಾಡು ಹಾಡಿದ್ದಾ? ಭಕ್ತಿಗೀತೆ ಹಾಡಿದ್ದಾ? ಲೆಕ್ಕ ಇಲ್ಲಿದೆ!