Select Your Language

Notifications

webdunia
webdunia
webdunia
webdunia

ಲೈವ್ ನಲ್ಲೇ ಲವ್ ಲೈಫ್ ಬಗ್ಗೆ ಸುಳಿವು ಬಿಟ್ಟುಕೊಟ್ರಾ ಗಿಣಿರಾಮ ನಟಿ ನಯನಾ?!

ಲೈವ್ ನಲ್ಲೇ ಲವ್ ಲೈಫ್ ಬಗ್ಗೆ ಸುಳಿವು ಬಿಟ್ಟುಕೊಟ್ರಾ ಗಿಣಿರಾಮ ನಟಿ ನಯನಾ?!
ಬೆಂಗಳೂರು , ಸೋಮವಾರ, 19 ಜೂನ್ 2023 (08:40 IST)
Photo Courtesy: Instagram
ಬೆಂಗಳೂರು: ಇತ್ತೀಚೆಗೆ ಮುಕ್ತಾಯವಾದ ಗಿಣಿರಾಮ ಧಾರವಾಹಿ ನಾಯಕಿ ನಟಿ ನಯನಾ ನಾಗರಾಜ್ ಇನ್ ಸ್ಟಾಗ್ರಾಂ ಲೈವ್ ನಲ್ಲೇ ತಮ್ಮ ಲವ್ ಲೈಫ್ ಬಗ್ಗೆ ಸುಳಿವು ಬಿಟ್ಟುಕೊಟ್ಟಿದ್ದಾರೆ.

ಗಿಣಿರಾಮ ಧಾರವಾಹಿ ಮುಕ್ತಾಯವಾದ ಹಿನ್ನಲೆಯಲ್ಲಿ ನಾಯಕ ನಟ ರಿತ್ವಿಕ್ ಮಠದ್ ಮತ್ತು ಖಳನಾಯಕಿ ಚೈತ್ರಾ ರಾವ್ ಸಚಿನ್ ಜೊತೆ ನಯನಾ ಇನ್ ಸ್ಟಾಗ್ರಾಂ ಲೈವ್ ಬಂದಿದ್ದರು. ಈ ವೇಳೆ ಸುಹಾಸ್ ಶಿವಣ್ಣ ಎಂಬವರು ಪದೇ ಪದೇ ನಯನಾಗೆ ಮೆಸೇಜ್ ಮಾಡುತ್ತಿದ್ದರು. ಜೊತೆಗೆ ಮೆಸೇಜ್ ನಲ್ಲಿ ಬಟರ್ ಫ್ಲೈ (ಚಿಟ್ಟೆ) ಮತ್ತು ಹಾರ್ಟ್ ಇಮೋಜಿ ಕಳುಹಿಸಿದ್ದರು. ಇದಕ್ಕೆ ರಿತ್ವಿಕ್ ಮತ್ತು ಚೈತ್ರಾ ನಯನಾ ಕಾಲೆಳೆದರು. ವೀಕ್ಷಕರೂ ಸುಹಾಸ್ ಯಾರು ಎಂದು ಪ್ರಶ್ನೆ ಮಾಡಲಾರಂಭಿಸಿದರು.

ಇದಾದ ಬಳಿಕ ಕೊನೆಯಲ್ಲಿ ಯಾರೋ ರಿತ್ವಿಕ್ ಪತ್ನಿ ಎಲ್ಲಿ ಎಂದು ಕೇಳಿದಾಗ ನಯನಾ ಅವರ ಬಟರ್ ಫ್ಲೈ ಇಲ್ಲೇ ಇದ್ದಾರೆ ಎಂದರು. ಆ ಮೂಲಕ ಬಟರ್ ಫ್ಲೈ ಕಳುಹಿಸಿದ ಸುಹಾಸ್ ಮತ್ತು ತಮ್ಮ ಸಂಬಂಧದ ಬಗ್ಗೆ ಪರೋಕ್ಷವಾಗಿ ಸುಳಿವು ನೀಡಿದರು. ಬಳಿಕ ತಮ್ಮ ಅಚಾತುರ್ಯದ ಅರಿವಾಗುತ್ತಿದ್ದಂತೆ ಸಾರಿ ಹಾಗೇನೂ ಇಲ್ಲ ಎಂದು ಮುಖ ಮರೆಸಿಕೊಂಡರು. ಹೀಗಾಗಿ ನಯನಾ ಮತ್ತು ಸುಹಾಸ್ ನಡುವಿನ ಸಂಬಂಧದ ಬಗ್ಗೆ ಎಂದು ವೀಕ್ಷಕರು ಲೈವ್ ನಲ್ಲಿ ಪ್ರಶ್ನೆ ಕೇಳುತ್ತಲೇ ಇದ್ದರು. ಒಂದು ಹಂತದಲ್ಲಿ ದಯವಿಟ್ಟು ಅದರ ಬಗ್ಗೆ ಈಗ ಮಾತು ಬೇಡ ಎಂದು ನಯನಾ ಹೇಳಬೇಕಾಗಿ ಬಂತು.

Share this Story:

Follow Webdunia kannada

ಮುಂದಿನ ಸುದ್ದಿ

ವಿವಾದಿತ ಸಂಭಾಷಣೆಗಳಿಗೆ ಕತ್ತರಿ ಹಾಕಲು ಆದಿಪುರುಷ್ ಚಿತ್ರತಂಡ ತೀರ್ಮಾನ