Select Your Language

Notifications

webdunia
webdunia
webdunia
webdunia

ಗಟ್ಟಿಮೇಳದ ಮಂಜುನಾಥ್ ಗೆ ಜನರು ಕೊಟ್ರು ಬೆಸ್ಟ್ ಅಪ್ಪ ಬಿರುದು

ಗಟ್ಟಿಮೇಳದ ಮಂಜುನಾಥ್ ಗೆ ಜನರು ಕೊಟ್ರು ಬೆಸ್ಟ್ ಅಪ್ಪ ಬಿರುದು
ಬೆಂಗಳೂರು , ಮಂಗಳವಾರ, 20 ಜೂನ್ 2023 (09:10 IST)
WD
ಬೆಂಗಳೂರು: ಕನ್ನಡ ಧಾರವಾಹಿಗಳಲ್ಲಿ ಇತ್ತೀಚೆಗೆ ಅಪ್ಪಂದಿರ ಪಾತ್ರಕ್ಕೂ ಪ್ರಾಮುಖ್ಯತೆ ಸಿಗುತ್ತಿದೆ. ತಮ್ಮ ಮೆಚ್ಚಿನ ಧಾರವಾಹಿಗಳ ಅಪ್ಪಂದಿರ ಪಾತ್ರ ನೋಡುವಾಗ ವಿಕ್ಷಕರು ತಮ್ಮ ತಂದೆಯನ್ನೇ ನೆನೆಸಿಕೊಳ್ಳುತ್ತಾರೆ. ಅಪ್ಪಂದಿರ ಪಾತ್ರಗಳು ಅಷ್ಟು ಆಪ್ತವಾಗಿರುತ್ತದೆ.

ಇತ್ತೀಚೆಗೆ ಅಪ್ಪಂದಿರ ದಿನದ ಪ್ರಯುಕ್ತ ಜೀ5 ಆಪ್ ಜೀ ವಾಹಿನಿಯ ಧಾರವಾಹಿಗಳ ಪೈಕಿ ಬೆಸ್ಟ್ ಅಪ್ಪ ಯಾರು ಎಂದು ಸಮೀಕ್ಷೆ ನಡೆಸಿತ್ತು. ಆ ವಿಭಾಗದಲ್ಲಿ ಜೀ ವಾಹಿನಿಯಲ್ಲಿ ಬರುವ ಎಲ್ಲಾ ಧಾರವಾಹಿಗಳ ಅಪ್ಪಂದಿರೂ ಸ್ಪರ್ಧೆಯಲ್ಲಿದ್ದರು. ವೀಕ್ಷಕರೇ ಬೆಸ್ಟ್ ಅಪ್ಪ ಯಾರು ಎಂದು ಆಯ್ಕೆ ಮಾಡಲು ಆನ್ ಲೈನ್ ಸಮೀಕ್ಷೆ ನಡೆಸಲಾಗಿತ್ತು.

ಅದರಂತೆ ಗಟ್ಟಿಮೇಳ ಧಾರವಾಹಿಯ ಮಂಜುನಾಥ್ ಬೆಸ್ಟ್ ಅಪ್ಪ ಬಿರುದು ಪಡೆದಿದ್ದಾರೆ. ವೀಕ್ಷಕರು ಅತೀ ಹೆಚ್ಚು ಸಂಖ್ಯೆಯಲ್ಲಿ ವೋಟ್ ಮಾಡಿ ಮಂಜುನಾಥ್ ಪಾತ್ರ ಮಾಡುತ್ತಿರುವ ನಟ ರವಿಕುಮಾರ್ ಅವರನ್ನು ಆಯ್ಕೆ ಮಾಡಿದ್ದಾರೆ. ಗಟ್ಟಿಮೇಳ ಧಾರವಾಹಿ ನಾಲ್ಕು ವರ್ಷಗಳಿಂದ ಪ್ರಸಾರವಾಗುತ್ತಿದ್ದು ನಂ.1 ಅಥವಾ 2 ನೇ ಸ್ಥಾನದಲ್ಲೇ ಟಿಆರ್ ಪಿ ಉಳಿಸಿಕೊಂಡಿದೆ. ಇಷ್ಟು ಜನಪ್ರಿಯವಾಗಿರುವ ಧಾರವಾಹಿಯಲ್ಲಿ ಕೆಲವು ಪಾತ್ರಗಳು ಬದಲಾಗಿದ್ದು ಇದೆ.

Share this Story:

Follow Webdunia kannada

ಮುಂದಿನ ಸುದ್ದಿ

ಇನ್ ಸ್ಟಾಗ್ರಾಂ ಪೋಸ್ಟ್ ಗೆ ರಶ್ಮಿಕಾ ಮಂದಣ್ಣ ಪಡೆಯುವ ಸಂಭಾವನೆ ಎಷ್ಟು ಗೊತ್ತಾ?