ಮೈಸೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜಾಮೀನು ಪಡೆದು ಹೊರಬಂದಿರುವ ನಟ ದರ್ಶನ್ ಅವರು ಸದ್ಯ ಫ್ಯಾಮಿಲಿ ಜತೆ ಸಮಯ ಕಳೆಯುತ್ತಿದ್ದಾರೆ.
ಈಚೆಗೆ ಸಂಕ್ರಾಂತಿ ಹಬ್ಬವನ್ನು ಕೂಡಾ ಸಹೋದರ ದಿನಕರ್ ಫ್ಯಾಮಿಲಿ ಹಾಗೂ ಪತ್ನಿ ಹಾಗೂ ಮಗನ ಜತೆ ದರ್ಶನ್ ತಮ್ಮ ಮೈಸೂರಿನ ಫಾರ್ಮ್‌ಹೌಸ್‌ನಲ್ಲಿ ಆಚರಿಸಿದರು.
ನಟ ಧನ್ವೀರ್ ಹಾಗೂ ಚಿಕ್ಕಣ್ಣ ಕೂಡಾ ಸಂಕ್ರಾಂತಿ ಹಬ್ಬದಲ್ಲಿ ಪಾಲ್ಗೊಂಡಿದ್ದರು. ಮೈಸೂರಿನಲ್ಲಿರುವ ವಿಜಯಲಕ್ಷ್ಮಿ ಅವರು ಫಾರ್ಮ್‌ಹೌಸ್‌ನ ಅದ್ಬುತ ಕ್ಷಣಗಳನ್ನು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದಾರೆ.
ಇದೀಗ ದರ್ಶನ್ ಹಾಗೂ ವಿಜಯಲಕ್ಷ್ಮಿ ಅವರು ತಮ್ಮ ಮಗನ ಜತೆ ಸಮಯವನ್ನು ಕಳೆಯುತ್ತಿದ್ದಾರೆ. ವಿಜಯಲಕ್ಷ್ಮಿ ಇಂದು ಹಂಚಿಕೊಂಡ ವಿಡಿಯೋ ಸ್ಟೋರಿಯಲ್ಲಿ ವಿನೀಶ್ ಕುದುರೆಗೆ ಟ್ರೈನಿಂಗ್ ಕೊಡುತ್ತಿರುವುದನ್ನು ಕಾಣಬಹುದು. ವಿಡಿಯೋ ಕೆಳಗಡೆ ಟ್ರೈನಿಂಗ್ ಟೈಮ್ ಎಂದು ಬರೆದುಕೊಂಡಿದ್ದಾರೆ.